Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
Homeಕ್ರೈಂಕಡವೆ ಬೇಟೆ l ಚರ್ಮ,ಮಾಂಸ ವಶ : ಓರ್ವನ ಬಂಧನ

ಕಡವೆ ಬೇಟೆ l ಚರ್ಮ,ಮಾಂಸ ವಶ : ಓರ್ವನ ಬಂಧನ

ಹಲಗೂರು: ಬಸವನ ಬೆಟ್ಟ ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿ ಚರ್ಮ ಮತ್ತು ಮಾಂಸ ಮಾರಾಟ ಮಾಡಲು ಯತ್ನಿಸಿದ ತಂಡದ ಓರ್ವ ನನ್ನ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಸವನ ಹಳ್ಳಿ ಗ್ರಾಮದ ಸಿದ್ದೇಗೌಡರ ಮಗ ಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಇತರ ನಾಲ್ವರು ಪರಾರಿಯಾಗಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆ ಸಿಬ್ಬಂದಿಗಳು ಕೆರೆಗೆ ಹೋಗುವ ದಾರಿಯಲ್ಲಿ ಗಸ್ತು ಮಾಡುತ್ತಿರುವಾಗ ರಸ್ತೆಯ ಸಮೀಪ ದ್ವಿಚಕ್ರ ವಾಹನ ನಿಂತಿರುವ ಬಗ್ಗೆ ಅನುಮಾನಗೊಂಡು ಸ್ಥಳದಲ್ಲಿಯೇ ಇದ್ದಾಗ ಕಪ್ಪು ಕವರ್ ಹಿಡಿದುಕೊಂಡು ಪ್ರತಿಯೊಬ್ಬ ಬಂದಿದ್ದು, ತಕ್ಷಣ ಎಚ್ಚೆತ್ತು ಆತನನ್ನು ಹಿಡಿದು ಪರಿಶೀಲಿಸಿದಾಗ ಆತನ ಬಳಿ ಕಡವೆ ಮಾಂಸ ಇರುವುದು ಪತ್ತೆಯಾಯಿತು.
ವಿಚಾರಣೆ ನಡೆಸಿದಾಗ ಬಸವನಹಳ್ಳಿ ಗ್ರಾಮದ ನಾಲ್ವರ ಜೊತೆಗೋಡಿ ಮತ್ತು ಅರಣ್ಯ ಪ್ರದೇಶದಲ್ಲಿ ಉರುಳು ಕಟ್ಟಿ ಕಡವೆಯನ್ನ ಬೇಟೆಯಾಡಿ ಮಾಂಸವನ್ನು ಹಂಚಿಕೊಂಡು ನನ್ನ ಪಾಲಿನ ಕಡವೆ ಮಾಂಸ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ತಕ್ಷಣ ಆತನನ್ನ ವಶಕ್ಕೆ ಪಡೆದು
ಕಡವೆ ಬೇಟೆಯಾಡಲು ಉರುಳು ಕಟ್ಟಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲಿಸಿ ಆತನ ಬಳಿ ಇದ್ದ ಕಡವೆ ಮಾಂಸ, ಚರ್ಮ ಮತ್ತು ದ್ವಿ ಚಕ್ರ ವಾಹನವನ್ನು ವಶಪಡಿಸಕೊಳ್ಳಲಾಗಿದೆ.
ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,
ತಲೆಮರಸಿಕೊಂಡಿರುವ. ನಾಲ್ವರ ಬಂಧನಕ್ಕೆ ವಲಯ ಅರಣ್ಯಾಧಿಕಾರಿ ರವಿ ಬುರ್ಜಿ ನೇತೃತ್ವದಲ್ಲಿ ಶೋಧ ಕೈಗೊಂಡಿದ್ದು, ತನಿಖೆ ಮುಂದುವರೆದಿದೆ
ಅರಣ್ಯ ಇಲಾಖೆ ಸಿಬ್ಬಂದಿಗಳಾದ ರವಿ ಬುರ್ಜಿ,ಪ್ರವೀಣ್ ಕುಮಾರ್, ಪ್ರಕಾಶ್,ಸಿದ್ದರಾಮ ಪೂಜಾರಿ,ಮೌನೇಶ್,ಶ್ರೇಯಸ್,ಬಾಲರಾಜ್,ಮಾದಪ್ಪ,ಮಂಜು ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments