Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
Homeಕ್ರೈಂಮಳವಳ್ಳಿ l ಸರ್ಕಾರಿ ಬಸ್ ನಿಲ್ದಾಣದಲ್ಲಿ ಏಳು ತಿಂಗಳ ಮಗು ಅಪಹರಣ

ಮಳವಳ್ಳಿ l ಸರ್ಕಾರಿ ಬಸ್ ನಿಲ್ದಾಣದಲ್ಲಿ ಏಳು ತಿಂಗಳ ಮಗು ಅಪಹರಣ

ಮಳವಳ್ಳಿ :- ಏಳು ತಿಂಗಳ ಮಗುವನ್ನ ಅಪರಿಚಿತ ಮಹಿಳೆ ಅಪಹರಣ ಮಾಡಿರುವ ಘಟನೆ ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಏಳು ತಿಂಗಳ ಮಗುವನ್ನ ತಾಯಿ ಮಹಿಳೆ ಕೈಗೆ ನೀಡಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಮಗುವಿನ ಜೊತೆ ಮಹಿಳೆ ನಾಪತ್ತೆಯಾಗಿದ್ದಾರೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ವಡ್ಡರಹಳ್ಳಿ ಗ್ರಾಮದ ಶಿವಕುಮಾರ್ ಪತ್ನಿ ಸವಿತಾ ಮಗು ಕಳೆದುಕೊಂಡ ತಾಯಿಯಾಗಿದ್ದಾರೆ.
ಮಳವಳ್ಳಿ ಸಾರಿಗೆ ಬಸ್ ನಿಲ್ದಾಣಕ್ಕೆ ಏಳು ತಿಂಗಳ ಮಗುವಿನ ಜೊತೆ ಬಂದಿದ್ದ ಸವಿತಾ ಅಂಗಡಿಗೆ ಹೋಗಿ ಬರಲು ಮಗುವನ್ನು ಮಹಿಳೆ ಯೊಬ್ಬರಿಗೆ ನೀಡಿದ್ದು. ಹೋಗಿ ಬರುವಷ್ಟರಲ್ಲಿ ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿದ್ದರು, ಸುತ್ತಮುತ್ತಲು ಹುಡುಕಾಡಿದರೂ ಮಗು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದು ಪೊಲೀಸರು ಮಗುವಿನ ಜೊತೆ ಪರಾರಿಯಾಗಿರುವ ಮಹಿಳೆಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments