Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
Homeಕ್ರೈಂಮೇಲುಕೋಟೆಯಲ್ಲಿ ಶಾಲಾ ಶಿಕ್ಷಕಿ ಕೊಲೆ ಮಾಡಿದ್ದ ಹಂತಕನ ಸೆರೆ

ಮೇಲುಕೋಟೆಯಲ್ಲಿ ಶಾಲಾ ಶಿಕ್ಷಕಿ ಕೊಲೆ ಮಾಡಿದ್ದ ಹಂತಕನ ಸೆರೆ

ಮಂಡ್ಯ :- ಪ್ರಸಿದ್ಧ ಯಾತ್ರಾಸ್ಥಳ ಮೇಲುಕೋಟೆಯಲ್ಲಿ ನಡೆದಿದ್ದ ಖಾಸಗಿ ಶಾಲೆಯ ಅತಿಥಿ ಉಪನ್ಯಾಸಕಿ ದೀಪಿಕಾ ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಮೇಲುಕೋಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮಾಣಿಕ್ಯನಹಳ್ಳಿ ಗ್ರಾಮದ ನಿತೇಶ್ ಕುಮಾರ್ (21) ಬಂದಿತ ಆರೋಪಿಯಾಗಿದ್ದು, ಈತನನ್ನು ಡಿವೈಎಸ್ ಪಿ ಮುರಳಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಾಣಿಕ್ಯನಹಳ್ಳಿಯ ದೀಪಿಕಾ ರನ್ನು ಅದೇ ಗ್ರಾಮದ ಪರಿಚಿತ ಯುವಕ ನಿತೇಶ್ ಕುಮಾರ್ ಕೊಲೆ ಮಾಡಿರುವ ಬಗ್ಗೆ ದೀಪಿಕಾ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು, ಇದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ದೀಪಿಕಾ ಕೊಲೆಗೆ ಪೂರ್ವಯೋಜಿತ ಸಂಚು ರೂಪಿಸಿದ್ದ ನಿತೇಶ್ ಅದಕ್ಕಾಗಿ ಮೊದಲೇ ತಯಾರಿ ಮಾಡಿಕೊಂಡಿದ್ದನು, ಒಂದು ದಿನ ಮೊದಲೇ ಗುಂಡಿಯನ್ನು ತೆಗೆದಿದ್ದು,ಅದೇ ಸ್ಥಳದಲ್ಲಿ ಕೊಲೆ ಮಾಡಬೇಕೆಂದು ನಿಶ್ಚಯ ಮಾಡಿಕೊಂಡಿದ್ದನ್ನು,ಅದರಂತೆ ಶಿಕ್ಷಕಿಯನ್ನು ಅಡ್ಡಗಟ್ಟೆ ಆಕೆಯ ವೇಲ್ ನಿಂದ ಉಸಿರು ಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಾಣಿಕ್ಯನಹಳ್ಳಿ ಗ್ರಾಮದ ವೆಂಕಟೇಶ್ ಪುತ್ರಿ ದೀಪಿಕಾ ಅದೇ ಗ್ರಾಮದ ಲೋಕೇಶ್ ರನ್ನ ಪ್ರೀತಿಸಿ ಮದುವೆಯಾಗಿದ್ದರು,ಇವರಿಗೆ ಮಗು ಸಹ ಇತ್ತು,ಈಕೆ ಮೇಲುಕೋಟೆಯ ಎಸ್ ಇ ಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು, ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ರಿಲ್ಸ್ ಮೂಲಕವೂ ಜನತೆಗೆ ಪರಿಚಿತರಾಗಿದ್ದರು, ಜ.20 ರಂದು ಬೆಳಿಗ್ಗೆ ಸ್ಕೂಟರ್ ನಲ್ಲಿ ಶಾಲೆಗೆ ತೆರಳಿದ್ದ ದೀಪಿಕಾ ಮರಳಿ ಮನೆಗೆ ಬಂದಿರಲಿಲ್ಲ, ಈ ಬಗ್ಗೆ ಹುಡುಕಾಟ ನಡೆಸಿದ್ದ ಕುಟುಂಬದವರು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು,
ಮೇಲುಕೋಟೆ ಯೋಗ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರೂ ಮೊಬೈಲ್ ನಲ್ಲಿ ಚಿತ್ರೀಕರಿಸಿ ಪೊಲೀಸರಿಗೆ ಕಳುಹಿಸಿಕೊಟ್ಟಿದ್ದರು, ಇದೇ ಆಧಾರದ ಮೇಲೆ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾಗ ಶಿಕ್ಷಕಿಯ ಸ್ಕೂಟರ್ ಪತ್ತೆಯಾಗಿತ್ತು,
ಮತ್ತಷ್ಟು ಹುಡುಕಾಟ ನಡೆಸಿದಾಗ ಜ. 22 ರಂದು ಯೋಗ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಣ್ಣುಗುಡ್ಡೆಯ ಬಳಿ ನೊಣಗಳು ಮುತ್ತಿಕೊಂಡು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಸ್ಥಳದಲ್ಲಿ ಮಣ್ಣು ತೆಗೆದಾಗ ಶಿಕ್ಷಕಿ ದೀಪಿಕಾರ ಮೃತದೇಹ ಪತ್ತೆಯಾಗಿತ್ತು,
ಮೇಲುಕೋಟೆ ಠಾಣೆಯ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ನಾಪತ್ತೆ ದೂರನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿಕೊಂಡು ತನಿಖೆ ಕೈಗೊಂಡಿದ್ದರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕೊಲೆ ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಈ ಮದ್ಯೆ ಕೊಲೆಯಾದ ದೀಪಿಕಾರ ಪತಿ ಲೋಕೇಶ್ ಅದೇ ಗ್ರಾಮದ ಪರಿಚಿತ ಯುವಕ ನಿತೇಶ್ ಕುಮಾರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು, ನನ್ನ ಪತ್ನಿಗೆ ಪರಿಚಿತನಾಗಿದ್ದ ನಿತೇಶ್ ಅಕ್ಕ ಎಂದು ಕರೆಯುತ್ತಿದ್ದ, ಆತನೇ ಕೊಲೆ ಮಾಡಿರಬಹುದು ಎಂದು ತಿಳಿಸಿದ್ದರು, ಇದಕ್ಕೆ ಪೂರಕ ಎಂಬಂತೆ ಕೊಲೆ ನಡೆದ ದಿನದಿಂದ ನಿತೇಶ್ ಕುಮಾರ್ ನಾಪತ್ತೆಯಾಗಿದ್ದನು, ಇದಕ್ಕೂ ಮುನ್ನ ನನ್ನನ್ನು ಹುಡುಕಬೇಡಿ, ನನ್ನಿಂದ ತಪ್ಪಾಗಿದೆ, ಅಕ್ಕನಿಗೆ ಮದುವೆ ಮಾಡಿ ಎಂದು ತಂದೆಗೆ ಸಂದೇಶ ಕಳುಹಿಸಿದ್ದನು,ಶಿಕ್ಷಕಿ ದೀಪಿಕಾಗೆ ಕೊನೆಯದಾಗಿ ಕರೆ ಮಾಡಿದ್ದವನು ಈತನೇ ಎಂಬುದು ಪತ್ತೆಯಾಗಿತ್ತು.
ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ದೀಪಿಕಾ ರನ್ನ ಕೊಲೆ ಮಾಡಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಈತ ಒಂದು ದಿನ ಮೊದಲೇ ಗುಂಡಿ ತೆಗೆದಿದ್ದನು, ಪೂರ್ವ ಯೋಜಿತ ಸಂಚಿನಂತೆ ಮೊಬೈಲ್ ಕರೆ ಮಾಡಿ ಕರೆಸಿಕೊಂಡಿದ್ದು ಈ ವೇಳೆ ಆಕೆಯ ಜೊತೆ ಜಗಳವಾಡಿ ಕುತ್ತಿಗೆಗೆ ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದು ನಂತರ ಗೋಣಿಚೀಲದಲ್ಲಿ ಹಾಕಿ ಗುಂಡಿಯಲ್ಲಿ ಹೂತಿಟ್ಟಿದ್ದನು ಎಂಬ ವಿಚಾರ ಗೊತ್ತಾಗಿದ್ದು, ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬ ಬಗ್ಗೆ ಪೊಲೀಸರ ವಿಚಾರಣೆ ಪೂರ್ಣಗೊಂಡ ನಂತರ ತಿಳಿದು ಬರಲಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments