Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedನಾಗಮಂಗಲ l ಕರಿಕ್ಯಾತನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಸಚಿವ ಸಿ ಆರ್ ಎಸ್ ಬಣ ಮೇಲುಗೈ

ನಾಗಮಂಗಲ l ಕರಿಕ್ಯಾತನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಸಚಿವ ಸಿ ಆರ್ ಎಸ್ ಬಣ ಮೇಲುಗೈ

ನಾಗಮಂಗಲ :-ತಾಲೂಕಿನ ಹೋಣಕೆರೆ ಹೋಬಳಿಯ ಕರಿಕ್ಯಾತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಬಣದ ಆರು ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಕರಿಕ್ಯಾತನಹಳ್ಳಿ ಹಾಲು ಉತ್ಪಾದಕರ ಸಂಘದ ನೂತನ ನಿರ್ದೇಶಕರಾಗಿ ಕರಿಕ್ಯಾತನಹಳ್ಳಿ ಗ್ರಾಮದ ಕೆ.ಜಿ. ಕುಮಾರ್ ಕೆ.ಹನುಮಂತೇಗೌಡ.ರಾಮಕೃಷ್ಣೇಗೌಡ .ಮಂಜುನಾಥ್. ಮತ್ತು ಅಯಿತನಹಳ್ಳಿ ಗ್ರಾಮದ ಸುರೇಶ್ ಹಾಗೂ ಕುಮಾರ್ ಚುನಾಯಿತರಾದರು.
ಸಂಘದಲ್ಲಿ ಸಚಿವರ ಬಣ ಮೇಲುಗೈ ಸಾಧಿಸಿದ ಹಿನ್ನೆಲೆಯಲ್ಲಿ ಚೆಲುವರಾಯಸ್ವಾಮಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ನೂತನ ನಿರ್ದೇಶಕರನ್ನು ಅಭಿನಂದಿಸಿ ಸನ್ಮಾನಿಸಿದರು.
ಗುತ್ತಿಗೆದಾರ ಯೋಗೇಶ್ ಮಾತನಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಗೆಲುವು ಸಾಧಿಸಿದ್ದು ಕೃಷಿ ಸಚಿವ ಚೆಲುವರಾಯಸ್ವಾಮಿ ರವರ ಕೈ ಬಲಪಡಿಸಿದ್ದಾರೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷದ ಮುಖಂಡರಾದ ಲಕ್ಷ್ಮೀ ನಾರಾಯಣಗೌಡ ಮತ್ತು ರಮೇಶ್ ಮುರಾಜಿ ಮುಂದಾಳತ್ವ ಭದ್ರ ಬುನಾದಿ ಹಾಕಿದೆ.
ಹಾಲು ಉತ್ಪಾದಕರ ಸಂಘವನ್ನು ಅಭಿವೃದ್ಧಿಗೊಳಿಸಿ ರೈತರಿಗೆ ಒಳ್ಳೆಯದು ಮಾಡಲಿ ಎಂದು ತಿಳಿಸಿದರು
ಕಾಂಗ್ರೆಸ್ ಮುಖಂಡ ಪ್ರಕಾಶ್ ಮಾತನಾಡಿ ಚುನಾವಣೆಯಲ್ಲಿ ಸಹಕಾರ ನೀಡಿ ಮತ ನೀಡಿದ ಷೇರುದಾರರಿಗೆ ಕೃತಜ್ಞತೆ ಸಮರ್ಪಿಸಿದರು.
ಮುಖಂಡರಾದ ರಮೇಶ್. ರಾಮಚಂದ್ರು.ಆನಂದ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments