Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಮನೆಯವರು ನಿದ್ರಿಸುತ್ತಿದ್ದಾಗ ಚಿನ್ನಾಭರಣ ದೋಚಿದ ಕಳ್ಳರು

ಮನೆಯವರು ನಿದ್ರಿಸುತ್ತಿದ್ದಾಗ ಚಿನ್ನಾಭರಣ ದೋಚಿದ ಕಳ್ಳರು

ಮಳವಳ್ಳಿ :- ಮನೆಯವರು ನಿದ್ರೆ ಮಾಡುತ್ತಿದ್ದ ವೇಳೆ ಹಿಂಬಾಗಿಲ ಮೂಲಕ ಒಳ ಪ್ರವೇಶಿಸಿ ಚಿನ್ನಾಭರಣ ದೋಚಿರುವ ಘಟನೆ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರೇಮ ರವರ ಮನೆಯಲ್ಲಿ ಅಂದಾಜು 5 ಲಕ್ಷ ಮೌಲ್ಯದ 72 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ ಊಟ ಮಾಡಿ ಕೆಲ ಹೊತ್ತು ಟಿವಿ ನೋಡಿ ಮನೆಯವರು ಮಲಗಿದ್ದರು,ತಡರಾತ್ರಿ ವೇಳೆ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನ ಬಾಗಿಲು ತೆರೆದು ಅದರಲ್ಲಿದ್ದ ಎರಡು ಎಳೆ ಸರ, ಓಲೆ, ಉಂಗುರ ಸೇರಿದಂತೆ 72 ಗ್ರಾಂ ಚಿನ್ನದ ಆಭರಣಗಳನ್ನು ದೋಚಿದ್ದಾರೆ.
ಬೆಳಿಗ್ಗೆ ಎದ್ದಾಗ ಹಿಂಭಾಗಿಲು ತೆರೆದಿರುವುದನ್ನು ಕಂಡು ಮನೆಯ ಬೀರು ನೋಡಿದಾಗ ಚಿನ್ನಾಭರಣಗಳು ನಾಪತ್ತೆಯಾಗಿದ್ದವು,
ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು,ಸ್ಥಳಕ್ಕೆ ಸಬ್ ಇನ್ ಸ್ಪೆಕ್ಟರ್ ಮಹೇಂದ್ರ ತೆರಳಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಜೊತೆ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments