Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಕೆರಗೋಡು ಹನುಮದ್ವಜ ವಿವಾದ l ಮಂಡ್ಯ ಬಂದ್ ನೀರಸ

ಕೆರಗೋಡು ಹನುಮದ್ವಜ ವಿವಾದ l ಮಂಡ್ಯ ಬಂದ್ ನೀರಸ

ಮಂಡ್ಯ :- ಕೆರಗೋಡು ಗ್ರಾಮದಲ್ಲಿ ಅರ್ಜುನ ಧ್ವಜಸ್ತಂಬದಿಂದ ಹನುಮ ಧ್ವಜ ತೆರವು ಮಾಡಿದ್ದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Img 20240209 103016 1

ಹಿಂದೂ ಸಂಘಟನೆಗಳು ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್ ಗೆ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ, ವರ್ತಕರು ಹಾಗೂ ಜನತೆ ಬಂದ್ ಬೆಂಬಲಿಸದ ಹಿನ್ನಲೆಯಲ್ಲಿ ಸಂಪೂರ್ಣ ವಿಫಲವಾಯಿತು.
ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿ ವ್ಯಾಪಾರ – ವಹಿವಾಟು, ಜನ ಜೀವನ, ಸಾರಿಗೆ ವ್ಯವಸ್ಥೆ ಎಂದಿನಂತಿದ್ದು ಎಲ್ಲಿಯೂ ಸಹ ಬಂದ್ ವಾತಾವರಣ ಕಂಡು ಬರಲಿಲ್ಲ.
ಪ್ರಮುಖ ವ್ಯಾಪಾರ ಕೇಂದ್ರ ಪೇಟೆ ಬೀದಿ, ವಿ.ವಿ ರಸ್ತೆ, ಅಂಬೇಡ್ಕರ್ ರಸ್ತೆ ( ನೂರಡಿ ರಸ್ತೆ ) ಆರ್ ಪಿ ರಸ್ತೆ, ಬನ್ನೂರು ರಸ್ತೆ, ಗುತ್ತಲು ರಸ್ತೆ ಹಾಗೂ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವರ್ತಕರು ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದರು.
ಮಾಲ್ ಗಳು, ದಿನಸಿ ಅಂಗಡಿ,ಹೋಟೆಲ್,ಬೇಕರಿ,ಕಬ್ಬಿಣ, ಸಿಮೆಂಟ್,ಬಟ್ಟೆ, ಚಿನ್ನದ ಅಂಗಡಿಗಳು, ಖಾಸಗಿ ಫೈನಾನ್ಸ್, ವಾಹನ ಮಾರಾಟ ಶೋರಂ. ಗ್ಯಾರೇಜ್,ಆಟೋಮೊಬೈಲ್ಸ್ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ಸುಗಮವಾಗಿ ನಡೆಯುತ್ತಿದ್ದದ್ದು ಕಂಡುಬಂದಿತು, ಬೀದಿ ಬದಿ ವ್ಯಾಪಾರ ಮತ್ತು ಮದ್ಯ- ಮಾಂಸ ಮಾರಾಟ ಸಹ ಎಂದಿನಂತಿತ್ತು.
ಸಾರಿಗೆ ವ್ಯವಸ್ಥೆ ಪ್ರತಿನಿತ್ಯದಂತೆ ಸಹಜವಾಗಿತ್ತು,ಸರ್ಕಾರಿ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ಸರ್ಕಾರಿ ಬಸ್ ಗಳು ಎಂದಿನಂತೆ ಸಂಚರಿಸಿದರೆ ಖಾಸಗಿ ಬಸ್ ಗಳು ಸಹ ಅಡೆತಡೆ ಇಲ್ಲದೆ ಸಂಚರಿಸಿದವು, ಆಟೋ,ಟ್ಯಾಕ್ಸಿ,ಸರಕು ಸಾಗಾಣಿಕೆ ವಾಹನ ಸಂಚಾರಕ್ಕೆ ಎಲ್ಲಿಯೂ ಅಡ್ಡಿಯಾಗಲಿಲ್ಲ.ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರ ಸಹಜ ಸ್ಥಿತಿಯಲ್ಲಿತ್ತು.
ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ಎಂದಿನಂತೆ ನಡೆದರೆ ಪೆಟ್ರೋಲ್ ಬಂಕ್ ಗಳು ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕುತ್ತಿದ್ದ ದೃಶ್ಯ ಕಂಡುಬಂದಿತು.
ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೆ ಹೆಜ್ಜೆ ಹಾಕಿದರು, ಖಾಸಗಿ ಶಾಲೆಯ ವಾಹನಗಳು ವಿದ್ಯಾರ್ಥಿಗಳನ್ನು ಹೊತ್ತು ಶಾಲೆಗಳತ್ತ ಪ್ರತಿನಿತ್ಯದಂತೆ ತೆರಳಿದವು, ಶಾಲಾ ಕಾಲೇಜಿನಲ್ಲಿ ಪಠ್ಯ ಬೋಧನೆ ಸುಗಮವಾಗಿ ನಡೆದವು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು, ಕಚೇರಿಗಳಲ್ಲಿ ಸಾರ್ವಜನಿಕರ ಸಂಖ್ಯೆ ಎಂದಿನಂತೆ ಕಂಡುಬಂದಿತು, ಬ್ಯಾಂಕ್ ಗಳು ವಹಿವಾಟು ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು.
ಜನಜೀವನ ಮಾಮೂಲಿ ದಿನದಂತೆ ಕಂಡುಬಂದಿತು, ಜನಸಾಮಾನ್ಯರು ದೈನಂದಿನ ಕೆಲಸ ಕಾರ್ಯಗಳಲ್ಲಿ ಎಂದಿನಂತೆ ತೊಡಗಿದ್ದರು.
ಹನುಮ ಧ್ವಜ ವಿವಾದದಲ್ಲಿ ಆರಂಭದಲ್ಲಿ ಸ್ಪಂದಿಸಿದ್ದ ಬಿಜೆಪಿ ಬಂದ್ ಬೆಂಬಲಿಸುವುದಿಲ್ಲ ಎಂದು ಘೋಷಿಸಿತ್ತು ಅದರಂತೆ ರ‍್ಯಾಲಿಯಲ್ಲಿ ಮಾತ್ರ ಪಕ್ಷದ ಮುಖಂಡರು ಭಾಗವಹಿಸಿದ್ದರು, ಜಾತ್ಯಾತೀತ ಜನತಾದಳ ಬಂದ್ ನಿಂದ ಸಂಪೂರ್ಣ ದೂರ ಉಳಿದಿತ್ತು.
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಲವಂತವಾಗಿ ಬಂದ್ ಮಾಡುವಂತೆ ಎಲ್ಲಿಯೂ ಸಹ ಒತ್ತಡ ಹಾಕದಿರುವುದು ಕಂಡುಬಂದಿತು.
ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಆಯಾ ಕಟ್ಟಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments