Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಮಂಡ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪಾದಯಾತ್ರೆ

ಮಂಡ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪಾದಯಾತ್ರೆ

ಮಂಡ್ಯ :- ಕೆರಗೋಡು ಗ್ರಾಮದ ಅರ್ಜುನ ಧ್ವಜಸ್ತಂಬದಲ್ಲಿದ್ದ ಹನುಮದ್ವಜ ತೆರವು ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಸ್ವಯಂ ಪ್ರೇರಿತ ಬಂದ್ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

Img 20240209 Wa0184

ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಜರಂಗ ಸೇನೆ ನೇತೃತ್ವದಲ್ಲಿ ನಗರದ ರೈಲು ನಿಲ್ದಾಣ ಎದುರಿನ ಆಂಜನೇಯ ಸ್ವಾಮಿ ದೇವಾಲಯದಿಂದ ಶ್ರೀರಾಮ ಹಾಗೂ ಹನುಮ ಭಕ್ತರು ಪಾದಯಾತ್ರೆ ಹೊರಟರು.
ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಜೈ ಶ್ರೀ ರಾಮ್, ಜೈ ಹನುಮಾನ್, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಘೋಷಣೆ ಕೂಗಿದರು, ಅದೇ ರೀತಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿ ಕಾರಿದರು.
ಜಿಲ್ಲಾಧಿಕಾರಿ ಕಚೇರಿಗೆ ಹೊರಟ ಪಾದಯಾತ್ರೆಗಳನ್ನು ವಕೀಲರ ಸಂಘದ ಎದುರು ಬ್ಯಾರಿಕೇಡ್ ಹಾಕಿ ತಡೆಯಲು ಪೊಲೀಸರು ಮುಂದಾಗಿದ್ದರು, ಇದನ್ನು ಕಂಡ ಪಾದಯಾತ್ರೆಗಳು ಸ್ವಲ್ಪ ದೂರದಲ್ಲಿಯೆ ರಸ್ತೆಯಲ್ಲಿ ಕುಳಿತು ರಾಮ ಗೀತೆಗಳನ್ನು ಹಾಡುತ್ತಾ ಹನುಮಾನ್ ಚಾಲೀಸಾ ಪಠಿಸಿದರು.
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ತಾಳಿದೆ, ಅರ್ಜುನ ಸ್ತಂಭದಲ್ಲಿ ಹನುಮ ಧ್ವಜವನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಕಾಂಗ್ರೆಸ್ ನಿಂದ ಕಲಿಯಬೇಕಾಗಿಲ್ಲ, ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಿಸುತ್ತೇವೆ, ಅದರ ಪಕ್ಕದಲ್ಲಿ ಮತ್ತೊಂದು ಧ್ವಜಸ್ತಂಬ ನಿರ್ಮಿಸಿ ಅತೀ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಶಪಥ ಮಾಡಿದರು.
ಕೆರಗೋಡು ಶ್ರೀರಾಮ ಭಜನಾ ಸಮಿತಿಯ ರಾಮಾಚಾರಿ, ಬಸಂತ, ಸಿದ್ದು, ಕಾರ್ತಿಕ್, ಬಿಜೆಪಿ ಮುಖಂಡರಾದ ಅರವಿಂದ್. ಶಿವಕುಮಾರ್ ಆರಾಧ್ಯ, ಸಿ.ಟಿ ಮಂಜುನಾಥ್ ನೇತೃತ್ವ ವಹಿಸಿದ್ದರು.

ಭಕ್ತರ ಸಂಖ್ಯೆ ಕ್ಷೀಣ…

ಹಿಂದೂ ಕಾರ್ಯಕರ್ತರ ಪಾದಯಾತ್ರೆಯಲ್ಲಿ ಶ್ರೀರಾಮ ಹಾಗೂ ಹನುಮಭಕ್ತರ ಸಂಖ್ಯೆ ಕ್ಷೀಣಿಸಿತ್ತು.
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಜ. 29 ರಂದು ನಡೆದ ಪಾದಯಾತ್ರೆಯಲ್ಲಿಮಹಿಳೆಯರು ಮಕ್ಕಳು ಸೇರಿದಂತೆ ಭಕ್ತ ಸಮೂಹ ಕಂಡುಬಂದಿತ್ತು.
ಆದರೆ ಇಂದಿನ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬರಲಿಲ್ಲ, ಯುವಕರು ಮಾತ್ರ ಭಾಗಿಯಾಗಿದ್ದರೆ, ಮಹಿಳೆಯರು ಮತ್ತು ಮಕ್ಕಳು ಬಂದಿರಲಿಲ್ಲ.

ಬಾರಿ ಪೊಲೀಸ್ ಭದ್ರತೆ
ಜನವರಿ ತಿಂಗಳ ಅಂತ್ಯದಲ್ಲಿ ನಡೆದ ಪಾದಯಾತ್ರೆ ಹಿಂಸಾಚಾರಕ್ಕೆ ತಿರುಗಿ ದಾಂದಲೆ ನಡೆದ ಹಿನ್ನೆಲೆಯಲ್ಲಿ ಇಂದಿನ ಪಾದಯಾತ್ರೆಗೆ ಬಾರಿ ಸಂಖ್ಯೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.
ಆಂಜನೇಯ ಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ಪಾದಯಾತ್ರೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಭದ್ರತೆ ನೀಡಿದರು.
ಯಾವುದೇ ಅಹಿತಕರ ಘಟನೆ ನಡೆಯ ದಂತೆ ಮುನ್ನೆಚ್ಚರಿಕೆ ವಹಿಸಿದ್ದ ಪೊಲೀಸ್ ಅಧಿಕಾರಿಗಳು ಪಾದಯಾತ್ರೆ ನಡೆದ ಮಾರ್ಗದುದ್ದಕ್ಕೂ ಭದ್ರತೆ ಕೈಗೊಂಡಿದ್ದರು. ಯಾತ್ರೆಯಲ್ಲಿ ಪಾದಯಾತ್ರಿಗಳು ಸಾಗುತ್ತಿದ್ದಂತೆ ಅಕ್ಕ ಪಕ್ಕದಲ್ಲಿ ಪೊಲೀಸರು ಸಾಗಿದರು. ಕುರುಬರ ಹಾಸ್ಟೆಲ್ ಬಳಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸ ಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದಂತೆ ವಕೀಲರ ಸಂಘದ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಪಾದಯಾತ್ರಿ ಗಳು ಮುನ್ನುಗ್ಗದಂತೆ ತಡೆಯೊಡ್ಡಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳು ಪಾದಯಾತ್ರೆ ವೇಳೆ ಹಾಜರಿದ್ದು ಯಾವುದೇ ಅಯುತಕರ ಘಟನೆ ನಡೆದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments