Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedನಾಗಮಂಗಲ l ಕೊಬ್ಬರಿ ಖರೀದಿ ನೋಂದಣಿಯಲ್ಲಿ ವಂಚನೆ : ರೈತರ ಪ್ರತಿಭಟನೆ

ನಾಗಮಂಗಲ l ಕೊಬ್ಬರಿ ಖರೀದಿ ನೋಂದಣಿಯಲ್ಲಿ ವಂಚನೆ : ರೈತರ ಪ್ರತಿಭಟನೆ

ನಾಗಮಂಗಲ :- ಕೊಬ್ಬರಿ ಖರೀದಿಗೆ ನೊಂದಣಿ ಮಾಡಿಕೊಳ್ಳದೆ ತೆಂಗು ಬೆಳೆಗಾರರನ್ನು ವಂಚಿಸಲಾಗಿದೆ ಎಂದು ಆರೋಪಿಸಿ ತಾಲೂಕಿನ ಕದಬಹಳ್ಳಿ ಎ.ಪಿ.ಎಂ.ಸಿ.ಉಪ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ( ಮೂಲ ಸಂಘಟನೆ ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡುವ ಕೇಂದ್ರದಲ್ಲಿ ನೊಂದಣಿ ಯಲ್ಲಿ ಅವ್ಯವಹಾರ ಮಾಡಲಾಗಿದೆ, ನೊಂದಣಿ ಕೇಂದ್ರದಲ್ಲಿ ನೊಂದಣಿ ಮಾಡಿಕೊಳ್ಳದೆ ಕೊಬ್ಬರಿ ಅಂಗಡಿ ಮಾಲೀಕರು ಮತ್ತು ದಳ್ಳಾಳಿಗಳ ಜೊತೆಗೂಡಿ ಪ್ರತಿ ಎಕರೆಗೆ ಸಾವಿರ ರೂಪಾಯಿ ಹಣ ಪಡೆಡು.ಬೇರೆ ಬೇರೆ ಕಡೆ ನೊಂದಣಿ ಮಾಡಿ ಮೂರೇ ದಿನದಲ್ಲಿ ನ್ಯಾಫೆಡ್ ನೊಂದಣಿ ಕೇಂದ್ರವನ್ನು ಮುಚ್ಚಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘಟನೆ ಅಧ್ಯಕ್ಷ ಎಲ್.ಸುರೇಶ್ ಮಾತನಾಡಿ,ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಕೃಷಿ ಸಚಿವರಾಗಿದ್ದರೂ ನಾಗಮಂಗಲ ತಾಲೂಕಿನ ರೈತರಿಗೆ ಅನ್ಯಾಯವಾಗುತ್ತಿದೆ ನ್ಯಾಫೆಡ್ ಮೂಲಕ
ಕೊಬ್ಬರಿ ಖರೀದಿ ಮಾಡುತ್ತೇವೆ ಎಂದು ಹೇಳಿ ರೈತರಿಗೆ ಟೋಕನ್ ಗಳನ್ನು ನೀಡಿ ಅಕ್ರಮವಾಗಿ ಬೇರೊಂದು ಸ್ಥಳದಲ್ಲಿ ಕೊಬ್ಬರಿ ಅಂಗಡಿ ಮಾಲೀಕರು ಮತ್ತು ದಳ್ಳಾಳಿಗಳ ಜೊತೆಗೂಡಿ ನೊಂದಣಿ ಮಾಡಿಕೊಂಡಿದ್ದಾರೆ ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು
ಖಜಂಚಿ ಬೋರೇಗೌಡ ಮಾತನಾಡಿ,ನೊಂದಣಿ ಮಾಡಿಕೊಳ್ಳುವುದಾಗಿ ಟೋಕನ್ ಗಳನ್ನು ನೀಡಿ ರೈತರಿಗೆ ಟೋಪಿ ಹಾಕಿದ್ದಾರೆ ನಿಯಮ ಬದ್ಧವಾಗಿ ಕೊಬ್ಬರಿ ಖರೀದಿ ಮಾಡದೆ ದಳ್ಳಾಳಿಗಳ ಜೊತೆ ಸೇರಿ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಸಂಘಟನೆಯ ಗೌರವಾಧ್ಯಕ್ಷ ರಾಜಣ್ಣ. ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಲೋಕೇಶ್, ಆದರ್ಶ,ರವಿಕಿರಣ್, ನಾಗೇಗೌಡ,ಪ್ರವೀಣ್, ಚೇತನ್,ರಘು. ಬಾಬು.ಪುಟ್ಟರಾಜು.ಮಧು ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments