Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಕಾವೇರಿಗಾಗಿ ಮುಂದುವರೆದ ವಾರಕ್ಕೊಮ್ಮೆ ಹೋರಾಟ

ಕಾವೇರಿಗಾಗಿ ಮುಂದುವರೆದ ವಾರಕ್ಕೊಮ್ಮೆ ಹೋರಾಟ

ಮಂಡ್ಯ :- ಕಾವೇರಿ ನದಿ ನೀರಿಗಾಗಿ ವಾರಕ್ಕೊಮ್ಮೆ ಚಳವಳಿಯನ್ನು ಕಾವೇರಿ ಹೋರಾಟಗಾರರು ಮಂಡ್ಯದಲ್ಲಿ ಮುಂದುವರಿಸಿದರು.

Img 20240212 Wa0207

ನಗರದ ಸರ್ ಎಂ ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ಹೋರಾಟಗಾರರು ಬಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಪ್ರತಿಭಟಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಆಗುತ್ತಿದೆ,ಆಳುವ ಸರ್ಕಾರಗಳು ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗುತ್ತಿಲ್ಲ, ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಜಲಾಶಯಗಳಲ್ಲಿ ನೀರಿಲ್ಲದಂತಾಗಿದೆ, ರೈತರು ಬೆಳೆ ಹಾಕಬಾರದು ಎಂದು ಸರ್ಕಾರ ಘೋಷಿಸಿದೆ, ರೈತರಿಗೆ ಎರಡು ಬೆಳೆ ಕೈ ತಪ್ಪಿದೆ, ಜೊತೆಗೆ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ,ಜಿಲ್ಲೆಯಲ್ಲಿ 3 600 ಕೋಟಿ ಬೆಳಗಿನಷ್ಟವಾಗಿದ್ದು, ಸರ್ಕಾರ ಈ ಕೂಡಲೇ ಬೆಳೆ ನಷ್ಟ ಪರಿಹಾರ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್,ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೆ ಗೌಡ, ಫಯಾಜ್, ನಾರಾಯಣಸ್ವಾಮಿ ನೇತೃತ್ವ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments