Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಸರ್ ಎಂ ವಿ ಸ್ನಾತಕೋತ್ತರ ಕೇಂದ್ರದ ಅಧ್ಯಾಪಕೇತರ ಸಿಬ್ಬಂದಿ ಪ್ರತಿಭಟನೆ

ಸರ್ ಎಂ ವಿ ಸ್ನಾತಕೋತ್ತರ ಕೇಂದ್ರದ ಅಧ್ಯಾಪಕೇತರ ಸಿಬ್ಬಂದಿ ಪ್ರತಿಭಟನೆ

ಮಂಡ್ಯ :- ತಾಲೂಕಿನ ತೂಬಿನ ಕೆರೆಯ ಸರ್ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ
ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾತ್ಕಾಲಿಕ ಅಧ್ಯಾಪಕೇತರ ಸಿಬ್ಬಂದಿಯನ್ನು ಏಕಾಏಕಿ ಕೇಂದ್ರದಿಂದ ಹೊರ ಹಾಕಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಅಧ್ಯಾಪ5ಕೇತರ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ  ಕೇಂದ್ರದಲ್ಲಿ ತಾತ್ಕಾಲಿಕ ಅಧ್ಯಾಪಕೇತರರ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದ ಸರ್ ಎಂ ವಿಶ್ವೇಶ್ವರಯ್ಯ
ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ 16 ವರ್ಷದಿಂದ 32 ಮಂದಿ ಸಿಬ್ಬಂದಿ ಸಂಚಿತ ವೇತನದ ಆಧಾರದಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದೆವು ಆದರೆ 202324ನೇ ಸಾಲಿನಿಂದ ಸ್ನಾತಕೋತ್ತರ
ಕೇಂದ್ರ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿದ್ದು, ಮೈಸೂರು ವಿಶ್ವವಿದ್ಯಾನಿಲಯ ತಾತ್ಕಾಲಿಕ ಅಧ್ಯಾಪ ಕೇತರ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಮುಂದುವರೆಸುವಂತೆ ಕೋರಿರುತ್ತಾರೆ, ಆದರೆ ಮಂಡ್ಯ ವಿಶ್ವವಿದ್ಯಾನಿಲಯ 2023 ಸೆಪ್ಟಂಬರ್ ಮಾಹೆಯಿಂದ ಕೇಂದ್ರವನ್ನು ಹಸ್ತಾಂತರ ಮಾಡಿಕೊಂಡಿರುವುದಿಲ್ಲ ಅಲ್ಲದೆ ಕಳೆದ ಜನವರಿ 29ರಂದು ತಾತ್ಕಾಲಿಕ ಅಧ್ಯಾಪಕೇತರ ವರ್ಗದವರ ಅವಶ್ಯಕತೆ ಇರುವುದಿಲ್ಲ ಎಂದು 32 ಸಿಬ್ಬಂದಿಯನ್ನು ಕೇಂದ್ರದಿಂದ ಹೊರಹಾಕಿ ಬೀಗ ಹಾಕಿದ್ದಾರೆ.
ವಿಶ್ವವಿದ್ಯಾನಿಲಯದ ಕೆಲಸ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಸೆಪ್ಟೆಂಬರ್ ನಿಂದ ಇಲ್ಲಿಯವರೆಗೂ ವೇತನ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದೇವೆ ಸರ್ಕಾರ ಮತ್ತು ಮೈಸೂರು ಮಂಡ್ಯ ವಿಶ್ವವಿದ್ಯಾನಿಲಯಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿಸಿದರು.
ತೂಬಿನಕೆರೆ ಸರ್ ಎಂ ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಸಂಚಿತ ವೇತನ ಆಧಾರದ ತಾತ್ಕಾಲಿಕ ಅಧ್ಯಾಪಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಅಧ್ಯಾಪಕೇತರ ಸಿಬ್ಬಂದಿಗಳ ಹೋರಾಟದಲ್ಲಿ ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ, ಭೂಮಿತಾಯಿ ಹೋರಾಟ ಸಮಿತಿಯ ಹನಿಯಂಬಾಡಿ ನಾಗರಾಜ್ ಭಾಗಿಯಾಗಿ ಬೆಂಬಲ ಸೂಚಿಸಿದರು.
ಎಸ್.ಎಂ.ಶಶಿಧರ, ಮಂಚೇಗೌಡ ನೇತೃತ್ವ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments