Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಡಾ.ಸರೋಜಿನಿ ಮಹಿಷಿ ಪರಿಸ್ಕೃತ ವರದಿಯನ್ನ ಕಾಯ್ದೆಯಾಗಿ ರೂಪಿಸಲು ಕದಂಬ ಸೈನ್ಯ ಆಗ್ರಹ

ಡಾ.ಸರೋಜಿನಿ ಮಹಿಷಿ ಪರಿಸ್ಕೃತ ವರದಿಯನ್ನ ಕಾಯ್ದೆಯಾಗಿ ರೂಪಿಸಲು ಕದಂಬ ಸೈನ್ಯ ಆಗ್ರಹ

ಮಂಡ್ಯ :- ಡಾ.ಸರೋಜಿನಿ ಮಹಿಷಿ ಪರಿಸ್ಕೃತ ವರದಿಯನ್ನು ಯಥಾವತ್ತಾಗಿ ಕಾಯ್ದೆಯಾಗಿ ರೂಪಿಸಿ ವಿಧಾನಮಂಡಲದ ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ಮಂಡ್ಯದಲ್ಲಿ ಕದಂಬ ಸೈನ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಎಸ್ ಡಿ ಜಯರಾಮ್ ( ನಂದಾ ) ವೃತ್ತದಲ್ಲಿ ಸೈನ್ಯದ ಕಾರ್ಯಕರ್ತರು ದೇಶ ಕಂಡ ಅಪ್ರತಿಮ ಚಕ್ರವರ್ತಿ, ಕನ್ನಡಿಗ ಇಮ್ಮಡಿ ಪುಲಕೇಶಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರತಿಭಟನೆ ನಡೆಸಿದರು.
ಕನ್ನಡಿಗರ ಉದ್ಯೋಗದಾತೆ ಡಾ| ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು 2017 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಆದರೆ ಇದುವರೆಗೂ ವರದಿಯನ್ನು ಕಾಯಿದೆಯಾಗಿ ಜಾರಿಗೆ ತರಲಿಲ್ಲ ಇದರಿಂದ ಕನ್ನಡಿಗರು ಉದ್ಯೋಗದಲ್ಲಿ ಸಾಕಷ್ಟು ವಂಚಿತರಾಗಿ ಸಂಕಷ್ಟದಲ್ಲಿದ್ದಾರೆ.,ಮಹಿಷಿ ವರದಿಯನ್ನು ಕಾಯಿದೆಯಾಗಿ ಜಾರಿಗೆ ತಂದರೆ ಮಾತ್ರ ಕನ್ನಡಿಗರ ಉದ್ಯೋಗ ಲಭಿಸುತ್ತದೆ ಎಂದು ಹೇಳಿದರು.
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯಗೊಳಿಸಿ ಸುಗ್ರಿವಾಜ್ಞೆ ಜಾರಿ ಮಾಡಿರುವುದನ್ನು ಕಾಯ್ದೆಯಾಗಿ ರೂಪಿಸಬೇಕು, ಕನ್ನಡ ನಾಡಿನಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಇದಕ್ಕಾಗಿ ಕಾಯ್ದೆ ಅಗತ್ಯವಾಗಿದೆ
ರಾಜ್ಯದ ಮೇಲೆ ಹಿಂದಿ ಹೇರಿಕೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಮುಂದಾಗಬೇಕು,ಹಿಂದಿ ಹೇರಿಕೆ ಕನ್ನಡ ಭಾಷೆಗೆ ಮಾರಕವಾಗಿದೆ. ಹಿಂದಿ ಭಾಷಿಕರಿಂದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುಜನರು ಹಿಂದಿ ಮಾತನಾಡುತ್ತಾರೆ ಎಂದು ಹಿಂದಿ ಹೇರಿಕೆ ಮಾಡಬಾರದು. ಒಕ್ಕೂಟ ರಾಷ್ಟ್ರದಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರ ಇದೆ. ಕನ್ನಡ ನಾಡಿಗೆ ಏಕೆ ಮಲತಾಯಿ ಧೋರಣೆ, ತ್ರಿಬಾಷಾ ಸೂತ್ರ ಬೇಡವೇ ಬೇಡ ಎಂದು ಆಗ್ರಹಿಸಿದರು.
ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಪುತ್ಥಳಿ ಕರ್ನಾಟಕದಲ್ಲಿ ಇಲ್ಲದಿರುವುದು ಕನ್ನಡಿಗರಿಗೆ ಮಾಡಿದ ಅವಮಾನ, ಈ ಕೂಡಲೇ ವಿಧಾನಸೌಧದ ಎದುರು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾಗಬೇಕು, ಬಾದಾಮಿ ರಾಯದುರ್ಗ ರಸ್ತೆಯಲ್ಲಿ ಅವಕಾಶ ನೀಡದೇ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮತ್ತು ಜಗಜ್ಯೋತಿ ಬಸವಣ್ಣರ ಪುತ್ತಳಿ ಅನಾವರಣ ಗೊಳ್ಳದೆ ಅನಾಥವಾಗಿ ಬಿದ್ದಿವೆ. ಬಾದಾಮಿ ನಗರದಲ್ಲಿ ಸ್ಥಳವಾಕಾಶ ನೀಡಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರ ಪ್ರಥಮ ಚಕ್ರವರ್ತಿ ಕದಂಬ ಮಯೂರವರ್ಮ ಪುತ್ಥಳಿಯನ್ನು ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನದ ಎದುರು ಹಾಗೂ ಶಿರಸಿ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಸ್ಥಾಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಎಂ ಎಸ್ ಆತ್ಮಾನಂದ,  ಕದಂಸಂಸ  ಅಂದಾನಿ ಸೋಮನಹಳ್ಳಿ, ಪುಟ್ಟಂಕಯ್ಯ, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್,ಡಾ| ದೇವನಹಳ್ಳಿ ದೇವರಾಜ್, ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಚಿಕ್ಕವೆಂಕಟಪ್ಪ ರಾಮು, ಜೋಸೆಫ್,ರಾಮ ಕೃಷ್ಣ,ಆರಾಧ್ಯ ಗುಡಿಗೇನಹಳ್ಳಿ, ಥಾಮಸ್ ಬೆಂಜಮಿನ್ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments