Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಕೊಬ್ಬರಿ ಖರೀದಿ ನೋಂದಣಿಯಲ್ಲಿ ವಂಚನೆ : ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ

ಕೊಬ್ಬರಿ ಖರೀದಿ ನೋಂದಣಿಯಲ್ಲಿ ವಂಚನೆ : ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ

ನಾಗಮಂಗಲ :- ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೋಂದಣಿಯಲ್ಲಿ ವಂಚನೆ ಮಾಡಿರುವ ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ( ಮೂಲ ಸಂಘಟನೆ ) ನೇತೃತ್ವದಲ್ಲಿ ರೈತರು ಪ್ರವಾಸಿ ಮಂದಿರ ವೃತ್ತದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ತಾಲೂಕಿನ ಕದಬಹಳ್ಳಿ ಎಂ.ಪಿ.ಎಂ.ಸಿ.ಆವರಣದಲ್ಲಿ ಕೊಬ್ಬರಿ ಕೇಂದ್ರವನ್ನು ತೆರೆದು ಖರೀದಿಗೆ ರೈತರಿಂದ ನೊಂದಣಿ ಮಾಡದೆ ದಳ್ಳಾಳಿ ಮತ್ತು ರಾಜಕಾರಣಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಎರಡೇ ದಿನದಲ್ಲಿ ಖರೀದಿ ಕೇಂದ್ರ ಬಾಗಿಲು ಮುಚ್ಚಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಅಧ್ಯಕ್ಷ ಎಲ್. ಸುರೇಶ್ ಮಾತನಾಡಿ, ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದ್ದು ನೊಂದಣಿ ಮಾಡಿದ ಅಧಿಕಾರಿಗಳನ್ನು ಈ ತಕ್ಷಣ ಅಮ್ಮ ಮತ್ತು ಮಾಡಬೇಕು, ಪ್ರಸ್ತುತ ನಡೆದಿರುವ ನೋಂದಣಿಯನ್ನು ರದ್ದು ಮಾಡಿ ಕೊಬ್ಬರಿ ಖರೀದಿಗೆ ಮರು ನೊಂದಣಿ ಮಾಡಬೇಕು ಎಂದು ಒತ್ತಾಯಿಸಿದರು.
ಖಂಜಾಚಿ ಬೋರೇಗೌಡ ಮಾತನಾಡಿ, ನೆಪ ಮಾತ್ರಕ್ಕೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿ ರಾಜಕಾರಣಿಗಳು ಮತ್ತು ದಲ್ಲಾಳಿಗಳ ಮನೆ ಮನೆಗೆ ಹೋಗಿ ನೊಂದಣಿ ಮಾಡಿದ್ದಾರೆ ಇಂತಹ ಅಕ್ರಮವನ್ನು ಸಹಿಸುವುದಿಲ್ಲ ರೈತರಿಗೆ ನ್ಯಾಯ ಬದ್ಧವಾಗಿ ನೋಂದಣಿ ಮಾಡಿ ಕೊಬ್ಬರಿ ಖರೀದಿಸಬೇಕೆಂದು ಆಗ್ರಹಿಸಿದರು
ಸಂಘಟನೆಯ ಗೌರವಾಧ್ಯಕ್ಷ ರಾಜಣ್ಣ. ಹೋಬಳಿ ಅಧ್ಯಕ್ಷ ತಿಮ್ಮೇಗೌಡ. ಸಿದ್ದಲಿಂಗಯ್ಯ. ಕಿರಣ್. ಚಿಕ್ಕೇಗೌಡ. ಪುಟ್ಟೇಗೌಡ ನೇತೃತ್ವ ವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments