ಕೆ ಆರ್ ಪೇಟೆ :- ಜಮೀನಿನಲ್ಲಿ ತುಂಡರಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಹಿನ್ನಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ
ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಿಕ್ಕೇರಿ ಹೋಬಳಿ ಲಕ್ಷ್ಮೀಪುರ ದಲ್ಲಿ ನಡೆದಿದೆ.
ಗ್ರಾಮದ ಗಾಯಿತ್ರಮ್ಮ (45) ದುರಂತದಲ್ಲಿ ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ.
ಗ್ರಾಮದ ಸಮೀಪ ಇದ್ದ ಜಮೀನಿಗೆ ಎಂದಿನಂತೆ ಗಾಯಿತ್ರಮ್ಮ ತೆರಳಿದ್ದು, ಆದರೆ ವಿದ್ಯುತ್ ತಂತಿ ಬಿದ್ದಿರುವುದನ್ನು ಗಮನಿಸದೆ ತುಳಿದಿದ್ದು ಇದರಿಂದ ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿದ್ದಾರೆ.
ಕಿಕ್ಕೇರಿ ಪೋಲೀಸ್ ಠಾಣೆಯ ಪಿಎಸ್ ಐ ರೇವತಿ, ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನೆಡೆಸಿದರು.
ಮೃತ ದೇಹದ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು,