26.2 C
New York
Thursday, July 18, 2024

Buy now

spot_img

ಮಾಜಿ ಸಂಸದ ಜಿ.ಮಾದೇಗೌಡ ಹೆಸರು ನಾಮಕರಣಕ್ಕೆ ಆಗ್ರಹ

ಮಂಡ್ಯ :- ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ ಮಾದೇಗೌಡರ ಹೆಸರನ್ನು ಮಂಡ್ಯ ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡಬೇಕು ಹಾಗೂ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಸೇನೆಯ ಕಾರ್ಯಕರ್ತರು ನಗರಸಭೆ ಎದುರು ಪ್ರತಿಭಟಿಸಿ ಆಯುಕ್ತರಿಗೆ ಮನವಿ ಸಲ್ಲಿಸಿ ಮಾಜಿ ಸಂಸದ ಜಿ.ಮಾದೇಗೌಡ ಮಂಡ್ಯ ಜಿಲ್ಲೆಯ ಶಕ್ತಿಯಾಗಿದ್ದು, ಯುವಕರಿಗೆ ಸ್ಫೂರ್ತಿದಾಯಕವಾಗಿದ್ದಾರೆ . ಲೋಕಸಭಾ ಸದಸ್ಯ, ಸಚಿವರಾಗಿ ಜನಪರ ಕೆಲಸ ಮಾಡಿರುವ ಅವರು ರೈತಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಕಾವೇರಿ ನೀರಿನ ವಿಚಾರದಲ್ಲಿ ಹೋರಾಟ ಮಾಡಿದ್ದು ಕಾವೇರಿ ಹೋರಾಟಗಾರ ಎಂದೇ ಜನಮನ್ನಣೆ ಪಡೆದಿದ್ದಾರೆ ಜಿ.ಮಾದೇಗೌಡರ ನೆನಪು ಶಾಶ್ವತವಾಗಿ ಇಂದಿನ ಯುವಕರಿಗೆ  ಆದರ್ಶಗಳು ದಾರಿದೀಪವಾಗುವ ದೃಷ್ಟಿಯಿಂದ ಅವರ ನೆನಪನ್ನು ಮಾಡಿಕೊಳ್ಳಲು ಅವರ ಹೆಸರನ್ನು ಮಂಡ್ಯ ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡಬೇಕು ಅದೇ ರೀತಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯವಾಗಿರಬೇಕು ಎಂದು ಸರ್ಕಾರ ಆದೇಶ ಮಾಡಿದೆ, ಈ ಬಗ್ಗೆ ವರ್ತಕರಿಗೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರು ನೋಟಿಸ್ ಜಾರಿ ಮಾಡಿದ್ದರು ಸಹ 30 ರಷ್ಟು ಅಂಗಡಿ ಮುಗ್ಗಟ್ಟುಗಳಲ್ಲಿ ಬದಲಾವಣೆ ಮಾಡದಿರುವುದು ಕಂಡುಬಂದಿದ್ದು ವರ್ತಕರ ಧೋರಣೆ ಸರಿಯಲ್ಲ, ಕನ್ನಡದಲ್ಲಿ ನಾಮಫಲಕ ಹಾಕದ ವರ್ತಕರ ಪರವಾನಗಿ ರದ್ದುಗೊಳಿಸಬೇಕು. ವರ್ತಕರಿಗೆ 15 ದಿನ ಕಾಲಾವಕಾಶ ನೀಡಿ ಅಷ್ಟರೊಳಗೆ ಕನ್ನಡ ನಾಮಪಲಕ ಹಾಕುವಂತೆ ಸೂಚಿಸಬೇಕು, ಇಲ್ಲದಿದ್ದರೆ  ಉಗ್ರ ಹೋರಾಟ ಮಾಡಬೇಕಾಗುತ್ತದೆಎಂದು ಎಚ್ಚರಿಸಿದರು.
ಡೆಂಗ್ಯೂ ಜ್ವರ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಮಂಡ್ಯ ನಗರದ ಚಾಟ್ಸ್, ಪಾನೀಪುರಿ, ಗೋಬಿ ಮಂಜೂರಿ, ಜ್ಯೂಸ್ ಅಂಗಡಿಗಳಲ್ಲಿ ಶುಚಿಯಾದ ಆರೋಗ್ಯಕರವಾದ ಆಹಾರ ಮತ್ತು ಪಾನೀಯ ನೀಡಲು ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,ಕೊಳೆತ ಮತ್ತು ಯೋಗ್ಯವಿಲ್ಲದ ಆಹಾರ ಪದಾರ್ಥಗಳನ್ನು ಬಳಸುತ್ತಿರುವ ಅಂಗಡಿಗಳ ಪರವಾನಗಿ ರದ್ದು ಮಾಡಿ ಅಂಗಡಿಗಳಿಗೆ ಬೀಗ ಮುದ್ರೆ ಹಾಕಬೇಕು ಎಂದು ಆಗ್ರಹಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್ ಸಿ ಮಂಜುನಾಥ್,ಮಹಾಂತಪ್ಪ, ರವಿ, ಕಿರಣ್,ಶ್ರೀನಿವಾಸ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles