8.5 C
New York
Tuesday, November 12, 2024

Buy now

spot_img

ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ದಂಧೆ ತಡೆಯದ ಪೊಲೀಸರ ವಿರುದ್ಧ ಪ್ರತಿಭಟನೆ

ಮಂಡ್ಯ :- ಯುವಜನರನ್ನು ಬಲಿ ಪಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್,ಇಸ್ಪೀಟ್ ಜೂಜಾಟ,ಹುಕ್ಕಾ ಅಡ್ಡ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ವೈಫಲ್ಯ ಖಂಡಿಸಿ ಮಂಡ್ಯದಲ್ಲಿ ಕನ್ನಡಪರ, ಪ್ರಗತಿಪರ ಸಂಘಟನೆ ಕಾರ್ಯಕರ್ತರು ಹಾಗೂ ಸಮಾನ ಮನಸ್ಕರು ಪ್ರತಿಭಟನೆ ನಡೆಸಿದರು.
ಕರುನಾಡ ಸೇವಕರ ಸಂಘಟನೆ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿ ಅಕ್ರಮ ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಇಸ್ಪೀಟ್ ಜೂಜಾಟ, ಹುಕ್ಜಾ ಅಡ್ಡ ಹಾಗೂ ಅಕ್ರಮ ಮಧ್ಯ ಮಾರಾಟ ವ್ಯಾಪಕವಾಗಿದೆ, ಯುವ ಜನತೆ ಇದರ ಸುಳಿಗೆ ಸಿಲುಕಿ ಹಣ ಆಸ್ತಿ ಕಳೆದುಕೊಂಡು ಜೀವವನ್ನೆ ಕಳೆದುಕೊಳ್ಳುತ್ತಿದ್ದಾರೆ, ಬೂದನೂರು ಗ್ರಾಮದ ಯುವಕ ತ್ಯಾಗರಾಜು ರೈಲಿಗೆ ತಲೆ ಕೊಟ್ಟು ಪ್ರಾಣತೆತ್ತಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದರೂ ಸಹ ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಒಳಗಿನಿಂದಲೆ ಹಾಳು ಮಾಡಲಿವೆ, ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕ್ರಿಕೆಟ್ ಬೆಟ್ಟಿಂಗ್, ಗದ್ದೆ ಬಯಲುಗಳಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ಸಾವಿರಾರು ಯುವಕರನ್ನು ಲಕ್ಷಾಂತರ ರೂಪಾಯಿ ಸಾಲದ ಬಲೆಗೆ ಕೆಡವಿದೆ.ಬೆಟ್ಟಿಂಗ್ ದಂಧೆಕೋರರು, ಇಸ್ಪೀಟು ಜೂಜೂ ಮಾಫಿಯಾದವರ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಅದೇ ರೀತಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವ್ಯಾಪಕವಾಗಿರುವ ಅಕ್ರಮ ಮದ್ಯ ಮಾರಾಟ.ಹುಕ್ಕಾ ಸರಬರಾಜು ನಾಗರೀಕ ಸಮಾಜವನ್ನು ದಿಗ್ಧಮೆ ಹುಟ್ಟಿಸಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಸಂಘಟಿತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗದ್ದೆ ಬಯಲುಗಳ ಇಸ್ಪೀಟು ಜೂಜು ಅಡ್ಡೆಗಳಿಗೆ ರಾಜಕೀಯ ನಾಯಕರು ಹಾಗೂ ಪೋಲಿಸ್ ಇಲಾಖೆ ಮಹಾ ಪೋಷಕರು ಎಂಬ ಚರ್ಚೆ ವ್ಯಾಪಕ ವಾಗಿದೆ, ಇಂತಹ ಧಂಧೆಕೋರರಿಂದ ನಿಯಮಿತವಾದ ಕಪ್ಪ ಕಾಣಿಕೆ ಪೋಲಿಸ್ ಠಾಣೆಗಳಿಗೆ ಸಂದಾಯವಾಗುತ್ತಿರುವುದರಿಂದ ಅಕ್ರಮ ಧಂಧೆಗಳನ್ನು ಸುಗಮವಾಗಿದೆ ಎಂದು ಆರೋಪಿಸಿದರು.
ಅಕ್ರಮ ಧಂಧೆಕೋರರ ಹಾವಳಿಯಿಂದ ರೈತರು ವಂಶಪಾರಂಪರ್ಯ ಕೃಷಿ ಭೂಮಿ ಕಳೆದುಕೊಳ್ಳುವಂತ ಸ್ಥಿತಿ ಸೃಷ್ಟಿಯಾಗಿದೆ.ಸಾವಿರಾರು ಯುವಕರು ಊರು ತೊರೆಯುವಂತ ಇಲ್ಲವೆ ಆತ್ಮಹತ್ಯೆಯ ದಾರಿ ಹಿಡಿಯುವಂತ ವಾತವರಣ ನಿರ್ಮಾಣವಾಗಿದೆ.ನಾಗರಿಕರಿಗೆ ಆತ್ಮವಿಶ್ವಾಸ ತುಂಬಬೇಕಿರುವ ಪೋಲಿಸ್ ಇಲಾಖೆ ಅಪಾದಿತರ ಜೊತೆ ನಿಂತಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೂದನೂರು ಯುವಕ ತ್ಯಾಗರಾಜು ಆತ್ಮಹತ್ಯೆ ಪ್ರಕರಣದಲ್ಲಿ ಪೋಲಿಸರ ವೈಫಲ್ಯ ಕಂಡುಬಂದಿದ್ದು, ಆ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಅರಕ್ಷಕ ನಿರೀಕ್ಷಕರನ್ನ ಸೇವೆಯಿಂದ ಅಮಾನತು ಮಾಡಬೇಕು. ಪೊಲೀಸರ ವಿರುದ್ಧ ಕ್ರಮದ ಮೂಲಕ ಬೆಟ್ಟಿಂಗ್ ಹಾಗೂ ಜೂಜೂ ಮಾಫಿಯಾಕ್ಕೆ ಬಲವಾದ ಸಂದೇಶ ರವಾನಿಸಿ,ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.ಬೆಟ್ಟಿಂಗ್ ಧಂದೆಕೋರರು ಹಾಗೂ ಗದ್ದೆ ಬಯಲು ಜೂಜೂಕೋರರ ವಿರುದ್ಧ ಕ್ರಮವಹಿಸಿ ಅಕ್ರಮ ತಂದೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಎಚ್ಚರಿಸಿದರು.
ಕರುನಾಡು ಸೇವಕರು ಸಂಘಟನೆಯ ವಿಭಾಗೀಯ ಸಂಚಾಲಕ ಎಂ ಬಿ ನಾಗಣ್ಣಗೌಡ, ಸಿ ಐ ಟಿ ಯು ನ ಸಿ ಕುಮಾರಿ, ಎ ಎಲ್ ಕೃಷ್ಣೆಗೌಡ, ರೈತ ಸಂಘದ ಶಿವಳ್ಳಿ ಚಂದ್ರಶೇಖರ್ ನೇತೃತ್ವ ವಹಿಸಿದ್ದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles