ಮಳವಳ್ಳಿ :- ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮಹಿಳೆಯರ ಸಾವನ್ನಪ್ಪಿದ ಘಟನೆ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಗಾಣಾಳು ಗ್ರಾಮದ ವಡಿವೇಲು ಪುತ್ರಿ ನದೀಯಾ (19 ) ಮುರಳಿ ಪತ್ನಿ ಶೋಭಾ (23 ) ನೀರುಪಾಲಾಗಿರುವ ದುರ್ದೈವಿ ಮಹಿಳೆಯರಾಗಿದ್ದಾರೆ.
ತಾಲೂಕಿನ ಮುತ್ತತ್ತಿಯ ಶ್ರೀ ಆಂಜನೇಯ ಸ್ವಾಮಿ ದೇವರ ಕಾರ್ಯಕ್ಕೆ ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಸುಮಾರು 50ಕ್ಕೂ ಹೆಚ್ಚು ಮಂದಿ ಮುತ್ತತ್ತಿಗೆ ಆಗಮಿಸಿದ್ದರು,ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಕಾಲು ಜಾರಿ ನೀರಿಗೆ ಬಿದ್ದು ಇಬ್ಬರು ಸಾವನಪ್ಪಿದ್ದಾರೆ.
ಹಲಗೂರು ಪೊಲೀಸರು ಸ್ಥಳಕ್ಕಾಗಮಿಸಿ, ಇಬ್ಬರ ಶವವನ್ನು ಹೊರಕ್ಕೆ ತೆಗೆದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.