ಮಂಡ್ಯ :- ಅಧಿಕಾರ ಶಾಶ್ವತ ಅಲ್ಲ ಮಂಡ್ಯ ಜನರ ಪ್ರೀತಿ ಶಾಶ್ವತ,ನಿಮ್ಮ ಸಹಕಾರ ಆಶೀರ್ವಾದ ಎಂದೆಂದಿಗೂ ಇರಲಿ ಸಂಸದೆ ಸುಮಲತಾ ಅಂಬರೀಶ್ ಆಶಯ ವ್ಯಕ್ತಪಡಿಸಿದರು
ನಗರದ ರೈತ ಸಭಾಂಗಣದಲ್ಲಿ ಡಾ ಅಂಬರೀಶ್ ಫೌಂಡೇಷನ್,ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ನಡೆದ ಡಾ ಎಂ. ಹೆಚ್. ಅಂಬರೀಶ್ ರವರ 72 ನೇ ಜನ್ಮ ಜಯಂತಿ,ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರ ಯಾವತ್ತು ಶಾಸ್ವತ ಅಲ್ಲ.
ಸಂಸದೆ ಸ್ಥಾನ ಹೋದರು ಸಹ ಜಿಲ್ಲೆಯ ಸೊಸೆ ಯಾಗಿರುವುದು ಅಭಿಮಾನದ ವಿಚಾರ,ಯಾವತ್ತು ಇಂತಹ ಸೌಭಾಗ್ಯ ನನ್ನ ಬಿಟ್ಟುಹೋಗಲ್ಲ. ರಾಜಕಾರಣದಲ್ಲಿ ಏನೋ ಆಗಬೇಕು ಅಂತ ರಾಜಕಾರಣಕ್ಕೆ ಬಂದಿಲ್ಲ.
ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ,ರಾಜಕಾರಣದಲ್ಲಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯ ಜನರ ಸಂಬಂಧ ನಿರಂತರ ವಾಗಿರಲಿದೆ ಎಂದು ಹೇಳಿದರು.
ಮನೆ ಮನೆಯಲ್ಲಿ ವ್ಯಕ್ತಿ ಜನಿಸೋದು ಸಾಮಾನ್ಯ ಆದರೆ ವ್ಯಕ್ತಿತ್ವ ಇರುವ ವ್ಯಕ್ತಿ ಜನಿಸಿವುದು ಅಪರೂಪ.ಅಂಬರೀಶ್ ಅದನ್ನ ಪಡೆದುಕೊಂಡು ಬಂದವರು.
ನನಗಿಂತ ಮಂಡ್ಯ ಜಿಲ್ಲೆಯ ಜನರಿಗೆ ಅವರ ಬಗ್ಗೆ ಗೊತ್ತಿದೆ. ಅವರ ಆಶಯ ಮುಂದುವರಿಸಲು ಡಾ.ಅಂಬರೀಶ್ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ.
ಅವರ ಸಾಧನೆಗಳನ್ನ ಮುಂದುವರಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರು ಸಾದನೆ ಮಾಡಿದ್ದಾರೆ.,ವಿದ್ಯಾರ್ಥಿಗಳು ಸಹ ಸಾಧನೆ ಮಾಡಿದ್ದಾರೆ ಮುಂದೆ ಜಿಲ್ಲೆಗೆ ಉತ್ತಮ ಹೆಸರು ಬರಲಿದೆ,
ಜಿಲ್ಲೆಯ ಜನತೆ ಅಂಬರೀಶ್ ಅವರನ್ನು ಪ್ರೀತಿ ಅಭಿಮಾನ ಕೊಟ್ಟು ಬೆಳೆಸಿದವರು.
ಅಂಬರೀಶ್ ಅವರನ್ನ ರಾಜ್ಯದ ಜನರು ಆಸೆ ಪಡೋರು.
ಅದ್ರೆ ಮಂಡ್ಯದವರನ್ನ ನೋಡಲು ಅಂಬರೀಶ್ ಇಷ್ಟ ಪಡುತ್ತಿದ್ದರು,ಅವರ ಹುಟ್ಟುಹಬ್ಬದ ದಿನ ಜನರು ನೋಡೋಕೆ ಮನೆಗೆ ಬರುತ್ತಿದ್ದರು .ಆದರೆ ಅವರ ಅಗಲಿಕೆ ಬಳಿಕ ಮಂಡ್ಯದಲ್ಲಿ ಅಂಬರೀಶ್ ಹುಟ್ಟುಹಬ್ಬ ಆಚರಣೆ ಮಾಡುತ್ತಾ ಬಂದಿದ್ದೇವೆ,ಅಭಿಮಾನಿಗಳ ಜೊತೆ ಜೊತೆ ನಾವು ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಫೌಂಡೇಶನ್ ಮೂಲಕ ಸಮಾಜಮುಖಿ ಕೆಲಸ ಮಾಡಲು ಇಚ್ಚಿಸಿದ್ದೇವೆ,ಕಷ್ಟ ದಲ್ಲಿರುವವರಿಗೆ ಸಹಾಯಮಾಡಲು ಮುಂದಾಗಿದ್ದೇವೆ
ಅಂಬರೀಶ್ ಅವರು ಸಿನಿಮಾ ರಂಗದಲ್ಲಿ ನಾಯಕರಾಗಿದ್ದರು, ಅವರೊಂದಿಗೆ ಜೀವನ ಮಾಡಿದ ನಾನು ಎಂದಿಗೂ ಅಹಂಕಾರವನ್ನು ಅವರಲ್ಲಿ ಕಂಡಿಲ್ಲ,ರಾಜಕಾರಣದಲ್ಲಿ ಅಧಿಕಾರಕ್ಕೆ ಆಸೆ ಪಟ್ಟವರಲ್ಲ.ಅನ್ಯಾಯ ಮಾಡಿಲ್ಲ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದರು . ಆದರೆ ಪ್ರಚಾರ ಮಾಡಿಕೊಂಡವರಲ್ಲ,ಅವರು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಾಗಬೇಕು ಅವರ ಸಾಧನೆ ಎಲ್ಲರೂ ಸ್ಮರಿಸುವಂತಾಗಬೇಕು.
ಅಂಬರೀಶ್ ಅವರು ಜೀವನ ಎಲ್ಲರ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರದ ಸಾಧಕರಾದ ಪಶು ವೈದ್ಯ ಡಾ ಕೆ ಎಸ್ ಜಯರಾಮ್, ಸಾವಯವ ಕೃಷಿಕ ಕೆ ಗೌಡಗೆರೆ ಗ್ರಾಮದ ರಂಗಶೆಟ್ಟಿ, ಶಿಕ್ಷಣ ಕ್ಷೇತ್ರದ ನಂಜರಾಜು ಹಾಗೂ ದೊಡ್ಡರಸಿನಕೆರೆ ಶ್ರೀ ಕಾಲ ಭೈರವೇಶ್ವರ ಜಾತ್ರಾ ಮಹೋತ್ಸವ ಸಮಿತಿಗೆ ಗೌರವ ಸಮರ್ಪಿಸಲಾಯಿತು, ಇದೆ ವೇಳೆ ಮರ ಬಿದ್ದು ಸಾವನಪ್ಪಿದ ಬೊಮ್ಮನಹಳ್ಳಿ ಗ್ರಾಮದ ಯುವಕ ಕಾರ್ತಿಕ್ ಕುಟುಂಬಕ್ಕೆ ನೆರವು ನೀಡಲಾಯಿತು,
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಕೀರ್ತಿ ತಂದ ತುಂಬಕೆರೆ ಸರ್ಕಾರಿ ವಸತಿ ಶಾಲೆಯ ಕನ್ನಲಿ ಗ್ರಾಮದ ವಿದ್ಯಾರ್ಥಿ ನವನೀತ್,,ಮಾರಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿ ವಿನಯ್, ಪೂರ್ಣಪ್ರಜ್ಜ್ನ ಶಾಲೆಯ ವಿದ್ಯಾರ್ಥಿಗಳಾದ ಖುಷಿ ಮತ್ತು ಗಗನ್ ಗೌಡ,ಪಿ ಯು ಸಿ ಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕೆ ಆರ್ ಪೇಟೆಯ ಕೆ ವಿ ಆರ್ ಸಂಯುಕ್ತ ಪಿ ಯು ಕಾಲೇಜಿನ ಮಾರ್ಕೋನಹಳ್ಳಿ ಗ್ರಾಮದ ಕಾವ್ಯ, ಬೆಳಕವಾಡಿ ಗ್ರಾಮದ ಸಿದ್ದಗಂಗಾ ಸ್ವಾಮಿ ಕಾಲೇಜಿನ ವಿದ್ಯಾರ್ಥಿಗಳಾದ ಮಾದೇಶ.ವಿ. ಮತ್ತು ರಕ್ಷಿತ.ಡಿ, ವಿಜ್ಞಾನ ವಿಭಾಗದ ಚಿನಕುರಳಿಯ ಎಸ್ ಟಿ ಜಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಗತಿ ಬಿ ಆರ್ ಮತ್ತು ಜೀವನ್ ಗೌಡ ಬಿ ಎಸ್ ಮಾಂಡವ್ಯ ಎಕ್ಸಲೆನ್ಸ್ ಕಾಲೇಜಿನ ಸಾನ್ವಿ ಶೆಟ್ಟಿ ಎಸ್, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಾಂಥೋಮ್ ಪಿ ಯು ಕಾಲೇಜಿನ ಎಂ ಎಸ್ ಗುರುಕಿರಣ್, ಸದ್ವಿದ್ಯಾ ಪಿ ಯು ಕಾಲೇಜಿನ ಆಯುಷ್ ಡಿ, ಕಾರ್ಮೆಲ್ ಕಾಲೇಜಿನ ಪಲ್ಲವಿ. ಆರ್ ರನ್ನ ಪುರಸ್ಕರಿಸಲಾಯಿತು,
ಸಹಕಾರ ಕ್ಷೇತ್ರದ ಬಿ ಎಲ್ ಬೋರೇಗೌಡ, ಕಾಟೇರ ಚಲನಚಿತ್ರಕ್ಕೆ ರೈತ ಗೀತೆ ಬರೆದ ಪುನೀತ್ ಆರ್ಯ, ಸಮಾಜ ಸೇವಕ ಕನ್ನಲಿ ಮಲ್ಲರಾಜು ರನ್ನ ಅಭಿನಂದಿಸಲಾಯಿತು,
ಪ್ರಾಧ್ಯಾಪಕ ಎಸ್ ಬಿ ಸಂಕರಗೌಡ ಕಾರ್ಯಕ್ರಮ ಉದ್ಘಾಟಿಸಿದರು,ಅಭಿಷೇಕ್ ಅಂಬರೀಶ್, ಬೇಲೂರು ಸೋಮಶೇಖರ್ ಇತರರಿದ್ದರು.