ಮಂಡ್ಯ :- ಚಲನಚಿತ್ರಗಳಲ್ಲಿ ಅಭಿನಯ ಮಾಡುವುದನ್ನು ನಿಲ್ಲಿಸುವುದಾಗಿ ತಿಳಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾನೀಗ ಫುಲ್ ಟೈಂ ರಾಜಕಾರಣಿ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲು ಸೋಲಾಗಿರಲಿಲ್ಲ ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಗಿತ್ತು, ಆದರೆ ಮಂಡ್ಯ ಜನತೆ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ಜಿಲ್ಲೆಯ ಜನರ ಆಪೇಕ್ಷ ಆಗಿತ್ತು ಅದರಂತೆ ಅವರ ಕುಮಾರಸ್ವಾಮಿ ರನ್ನ ಆಶೀರ್ವದಿಸಿದ್ದಾರೆ, ಎಲ್ಲಾ ವರ್ಗದ ಜನತೆ ಮತನೀಡಿದ್ದರಿಂದ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ರವರ ಮೇಲೆ ಜನತೆ ಇಟ್ಟಿರುವ ಗೌರವ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ, ಮುಂದಿನ ಐದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದಾರೆ, ಕಾಂಗ್ರೆಸ್ ಪಕ್ಷದವರ ಟೀಕೆಗೆ ಮಂಡ್ಯ ಜನತೆ ಉತ್ತರ ನೀಡಿದ್ದಾರೆ, ಅಧಿಕಾರದಲ್ಲಿದ್ದಾಗ ಏನು ಬೇಕಾದರೂ ಮಾತನಾಡಬಹುದು ಎಂದು ತಿಳಿದುಕೊಂಡವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಕರ್ನಾಟಕವನ್ನು ಸಮೃದ್ಧವಾಗಿ ಅಭಿವೃದ್ಧಿಪಡಿಸುವ ದೂರದೃಷ್ಟಿ ಹೊಂದಿರುವ ಎಚ್ ಡಿ ಕುಮಾರಸ್ವಾಮಿ ನಾಯಕತ್ವವನ್ನ ಬಿಜೆಪಿ ಪಕ್ಷಬಳಸಿಕೊಳ್ಳಲಿದೆ. ಕುಮಾರಣ್ಣ ಸಚಿವ ಸ್ಥಾನಕ್ಕಾಗಿ ಒತ್ತಡ ಮಾಡಲ್ಲ. ಕುಮಾರಸ್ವಾಮಿ ಹಿರಿತನ ಆಧಾರದ ಮೇಲೆ ಸಚಿವ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ವಿಧಾನಸಭೆ ಉಪಚುನಾವಣೆಗೆ ಮೈತ್ರಿ ಪಕ್ಷದ ನಾಯಕರು ಸಮಾಲೋಚಿಸಿ ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ, ಉಪಚುನಾವಣೆ ವಿಚಾರ ಮಾತನಾಡಬಹುದು ಅಪ್ರಸ್ತುತ, ನನಗೆ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ಹೇಳಿದರು.
ಸುಮಲತಾ ಅಂಬರೀಶ್ ಈ ಬಾರಿಯ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಗೆಲುವನ್ನ ಬಯಸಿದ್ದರು. ಪ್ರಚಾರ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗದಿದ್ದರೂ ಅವರ ಬೆಂಬಲಿಗರಿಗೆ ಸೂಚಿಸಿದ್ದರು. ನಾನೇ ಅವರಿಗೆ ಕರೆ ಮಾಡಿ ಧನ್ಯವಾದ ಸಮರ್ಪಿಸುತ್ತೇನೆ ಎಂದು ತಿಳಿಸಿದರು.