ನಾಗಮಂಗಲ :- ರಾಷ್ಟ್ರೀಯ ಹೆದ್ದಾರಿ -75 ರ ಕದಪಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸ್ಥಳೀಯ ಜನರಿಂದ ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಸಮಿತಿಯ ಸಂಚಾಲಕ ಕ್ಯಾತನಹಳ್ಳಿ ಮಂಜು ನೇತ್ರತ್ವದಲ್ಲಿ ಸ್ಥಳೀಯ ಜನತೆ ಟೋಲ್ ಬಳಿ ಧರಣಿ ನಡೆಸಿ ಗ್ರಾಮೀಣ ಪ್ರದೇಶದ ಸ್ಥಳೀಯ ಜನರಿಂದ ಟೋಲ್ ಸಂಗ್ರಹ ಮಾಡಬಾರದು ಎಂದು ತಾಕೀತು ಮಾಡಿದರು
ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ 25 ಕಿಲೋ ಮೀಟರ್ ಅಂತರದಲ್ಲಿ ನಲ್ಲಿಗೆರೆ ಮತ್ತು ಕದಬಹಳ್ಳಿ ಬಳಿ ಅಕ್ರಮವಾಗಿ ಎರಡು ಟೋಲ್ ಗಳು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರಿ ನಿಯಮದಂತೆ ಇದು ಅಕ್ರಮವಾಗಿರುತ್ತದೆ ಈ ಟೋಲ್ ಗಳಲ್ಲಿ ಸ್ಥಳೀಯ ಗ್ರಾಮೀಣ ಪ್ರದೇಶದ ಜನತೆ ಸಂಚರಿಸಲು ಸಂಪರ್ಕ ರಸ್ತೆ ನಿರ್ಮಿಸಿಲ್ಲ, ಸ್ಥಳೀಯರು ಜಮೀನು ಮತ್ತು ಮನೆಗಳಿಗೆ ಹೋಗುವಾಗ ಟೋಲ್ ಪಾವತಿಸಿ ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ ಈ ಸಂಬಂಧ ಹಲವು ವರ್ಷಗಳಿಂದ ಸುತ್ತಮುತ್ತ ಇರುವ ಗ್ರಾಮೀಣ ಪ್ರದೇಶದ ಜನರು ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ,ನಿಯಮ ಬಾಹಿರ ಟೋಲ್ ಗಳನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು ಗೋವಿಂದರಾಜು.ರುದ್ರೇಶ್. ಚಿರಂಜೀವಿ. ಮಂಜುನಾಥ್. ಮೌರ್ಯ. ಪಾಪಣ್ಣ ಇತರರಿದ್ದರು.