ಮಂಡ್ಯ :- ವಿಧಾನ ಪರಿಷತ್ತಿನ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ ವಿವೇಕಾನಂದ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಮೊದಲ ಪ್ರಾಶಸ್ತ್ರದ ಮತಗಳಲ್ಲೇ ವಿವೇಕಾನಂದ ಅವರು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ವಿರುದ್ಧ ಭಾರಿ ಅಂತರಿಂದ ಗೆಲುವಿನ ನಗೆ ಬೀರಿದ್ದಾರೆ.
ಮೈತ್ರಿ ಅಭ್ಯರ್ಥಿಗೆ ವಿವೇಕಾನಂದಗೆ 10823 ಮತ ಗಳಿಸಿದ್ದರೆ,ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6201 ಮತ ದೊರೆತಿದ್ದು,1049 ಮತಗಳು ಕುಲಗೆಟ್ಟಿವೆ.
ಲೋಕಸಭೆ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿರುವ ಜೆಡಿಎಸ್‌ಗೆ ವಿವೇಕಾನಂದ ಅವರ ಗೆಲುವು ಮತ್ತಷ್ಟು ಖುಷಿ ತಂದರೆ, ಕಾಂಗ್ರೆಸ್ ಹೀನಾಯ ಸೋಲು ಪಕ್ಷಕ್ಕೆ ಶಾಕ್ ನೀಡಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹೀನಾಯವಾಗಿ ಸೋಲನ್ನು ಅನುಭವಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಮುಖಭಂಗವಾದಂತಾಗಿದೆ.
ಮತ ಎಣಿಕೆಯ ಆರಂಭದಿಂದಲೂ ವಿವೇಕಾನಂದ ಅವರು ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಗೆಲುವಿನ ಖೋಟಾ ತಲುಪಿದ ಕೂಡಲೇ ಅವರ ಜಯ ಅಧಿಕೃತವಾಗಿ ದಾಖಲಾಯಿತು. ಸತತವಾಗಿ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದ ಮರಿತಿಬ್ಬೇಗೌಡ ಅವರಿಗೆ ಈ ಸೋಲಿನಿಂದ ತೀವ್ರ ಮುಖಭಂಗವಾಗಿದೆ. ಮೊದಲ ಬಾರಿಗೆ ಸ್ಪರ್ಧಿಸಿದ್ದ ವಿವೇಕಾನಂದ ಅವರು ನಾಲ್ಕುವರೆ ಸಾವಿರಕ್ಕೂ ಹೆಚ್ಚು ಹೆಚ್ಚು ಬಹುಮತಗಳಿಂದ ಗೆಲುವು ಸಾಧಿಸಿದ್ದು ವಿಶೇಷವಾಗಿದ್ದರೆ ಭವಿಷ್ಯ ರೂಪಿಸುವ ಶಿಕ್ಷಕರೇ ಚಲಾಯಿಸಿದ್ದ ಮತಗಳ ಪೈಕಿ ಸಾವಿರಕ್ಕೂ ಹೆಚ್ಚುಹೆಚ್ಚು ಮತಗಳು ಅಸಿಂಧು ವಾಗಿರುವುದು ಗಮನಾರ್ಹವಾಗಿದೆ.