ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಬಿಜೆಪಿ ಮೈತ್ರಿಕೂಟಕ್ಕೆ ಜನರು ಆಶೀರ್ವದಿಸಿದ್ದು, ಕಾಂಗ್ರೆಸ್ ಹೀನಾಯವಾಗಿ ಸೋಲುವ ಮೂಲಕ ಭಾರಿ ಮುಖಭಂಗ ಅನುಭವಿಸಿದೆ.
ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ ( ಸ್ಟಾರ್ ಚಂದ್ರು ) ರನ್ನ ಮಣಿಸಿ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಬಿಜೆಪಿ ಪಕ್ಷದ ಜೊತೆಗಿನ ಮೈತ್ರಿ ಫಲಿಸಿದ್ದು, ಕಳೆದ ಬಾರಿ ತಮ್ಮ ಪುತ್ರ ಸೋತ ಕ್ಷೇತ್ರದಲ್ಲಿ ಗೆಲುವಿನ ದಡ ಸೇರಿದ್ದು, ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನ ಮುಖಭಂಗಕ್ಕಿಡು ಮಾಡಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿಯೂ ಎಚ್ ಡಿ ಕುಮಾರಸ್ವಾಮಿ ಹೆಚ್ಚು ಮತಗಳ ಅಂತರ ಪಡೆದಿದ್ದು, ಅಂಚೆ ಮತಗಳು ಸಹ ಇವರನ್ನು ಕೈ ಹಿಡಿದಿವೆ ಹಾಗಾಗಿ 2,84,620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೂಡಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸ್ಪರ್ಧಾ ಕಣಕ್ಕೆ ಇಳಿಸಿದ್ದರು ಆದರೆ ಪಕ್ಷೇತರರಾಗಿ ಸ್ಪರ್ಧಿಸಿದ್ದಸುಮಲತಾ ಅಂಬರೀಶ್ ಜಯಭೇರಿ ಬಾರಿಸಿದ್ದರು ಇದೀಗ ಎಚ್ ಡಿ ಕುಮಾರಸ್ವಾಮಿ ಗೆಲ್ಲುವ ಮೂಲಕ ರಾಜಕೀಯ ವಿರೋಧಿಗಳಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮನೆತನದ ಪ್ರಾಬಲ್ಯತೆಯನ್ನು ತೋರಿಸಿದ್ದಾರೆ.
ಜಾತ್ಯಾತೀತ ಜನತಾದಳ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ -851881 ಮತವನ್ನು ಪಡೆದಿದ್ದರೆ ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು -567261 ಮತಗಳಿಸಿದ್ದಾರೆ ಇನ್ನುಳಿದಂತೆ ಬಹುಜನ ಪಕ್ಷದ ಎಸ್ ಶಿವಶಂಕರ್ -6964, ಕೆ ಆರ್ ಎಸ್ ಪಕ್ಷದ ಚಂದ್ರಶೇಖರ್ -1476, ಪಕ್ಷೇತರರಾದ ಬುಡ್ಡಯ್ಯ – 1370, ಎಚ್ ಡಿ ರೇವಣ್ಣ – -590, ಲೋಕೇಶ್ ಎಸ್ – 1163, ಎಸ್ ಅರವಿಂದ -442, ಚನ್ನಮಾಯಿಗೌಡ -497, ಚಂದನ್ ಗೌಡ ಕೆ -12394, ಎನ್ ಬಸವರಾಜು -843, ಬೀರೇಶ್ ಸಿ.ಟಿ -931, ರಾಮಯ್ಯ ಡಿ -3810, ರಂಜಿತಾ ಎನ್ -2909 ಮತಗಳನ್ನು ಪಡೆದಿದ್ದರೆ 7736 ಮತದಾರರು ನೋಟಾಗೆ ಹಕ್ಕು ಚಲಾಯಿಸಿದ್ದಾರೆ.