-4 C
New York
Monday, December 23, 2024

Buy now

spot_img

ವಾರಣಾಸಿ ಗಂಗಾರತಿ ಮಾದರಿ ಕಾವೇರಿ ಆರತಿ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ಮಂಡ್ಯ :- ಪ್ರಸಿದ್ಧ ಪುಣ್ಯಕ್ಷೇತ್ರ ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆ ಕಾವೇರಿ ಆರತಿ ಮಾಡಲು ಸರ್ಕಾರ ಚಿಂತನೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೃಷ್ಣರಾಜಸಾಗರಕ್ಕೆ ಭೇಟಿ ನೀಡಿದ್ದ ಅವರು ಪರಿಶೀಲನೆ ನಂತರ ಮಾತನಾಡಿ ಕಾವೇರಿ ಆರತಿ ಮೂಲಕ ಕಾವೇರಿ ಮಾತೆಗೆ ಗೌರವ ಸಮರ್ಪಿಸಲು ಮುಂದಾಗಿದ್ದೇವೆ, ಮಂಡ್ಯ ಮೈಸೂರು ಕೊಡಗು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡವನ್ನು ವಾರಣಾಸಿಗೆ ಕಳುಹಿಸಿಕೊಡಲಾಗುವುದು, ಅವರು ತಿಂಗಳೊಳಗೆ ವರದಿ ನೀಡಿದ ನಂತರ ಯಾವ ಮಾದರಿಯಲ್ಲಿ, ಯಾವ ಸ್ಥಳದಲ್ಲಿ ಕಾವೇರಿ ಆರತಿ ನಡೆಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಧಾರ್ಮಿಕ ದತ್ತಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮ ಜಂಟಿಯಾಗಿ ಕಾವೇರಿ ಆರತಿ ನಡೆಸಲಿದೆ ಎಂದು ಮಾಹಿತಿ ನೀಡಿದರು.
ವರುಣನ ಅನುಗ್ರಹದಿಂದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿವೆ, ಕಳೆದ ವರ್ಷ ಜಲಾಶಯ ತುಂಬದೆ ರೈತರು ಸಂಕಷ್ಟದಲ್ಲಿದ್ದರು ಸರ್ಕಾರ ಅವರ ನೆರವಿಗೆ ನಿಂತಿತ್ತು, ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಹರಿಸಲು ಸೂಚಿಸಿತ್ತು,ಆದರೆ ಸರ್ಕಾರ ನೀರು ಬಿಡಲು ಮುಂದಾಗಲಿಲ್ಲ, ಕೆಲವರು ನೀರು ಬಿಡಲಾಗಿದೆ ಎಂದು ಹೇಳಿದರು ಆದರೆ ನಾವು ಸರ್ವ ಪಕ್ಷಗಳ ಮುಖಂಡರ ಜೊತೆ ಚರ್ಚೆ ಮಾಡಿದ್ದೆವು, ವರುಣನ ಕೃಪೆಯಿಂದ ತಮಿಳುನಾಡಿಗೆ 30 ಟಿಎಂಸಿ ನೀರು ಹರಿದಿದೆ, 10 ಟಿಎಂಸಿ ನೀರು ಕೊಟ್ಟರೆ ಅವರ ಪಾಲಿನ ಕೋಟಾ ಮುಗಿಯಲಿದೆ, ಹೆಚ್ಚಿನ ನೀರು ಹರಿದು ಹೋಗುತ್ತಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ 1657 ಕೆರೆಗಳಿದ್ದು ಇದೀಗ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿರುವುದರಿಂದ ಈ ಎಲ್ಲಾ ತೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಅಧಿಕಾರಿಗಳು ತುರ್ತು ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ರೈತಪರವಾದ ಸರ್ಕಾರವಾಗಿದ್ದು, ಯಾವುದೇ ತೊಂದರೆ ಬಂದರೂ ರೈತರ ಹಿತ ಕಾಯಲು ಸದಾ ಬದ್ಧವಾಗಿರುತ್ತೇವೆ. ಕೃಷಿ ಸಚಿವರು ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ತೊಂದರೆಯಾಗದAತೆ ಮುಂಜಾಗ್ರತೆ ವಹಿಸಿ ಎರಡು ಲಕ್ಷ ಹೆಕ್ಟೇರ್ ಬಿತ್ತನೆಯ ಕಾರ್ಯಕ್ರಮ ರೂಪಿಸಿದ್ದು, 5,90,000 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 27 ಲಕ್ಷ ಟನ್ ರಸಗೊಬ್ಬರವನ್ನು ಸಹ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಉಂಟಾಗದAತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 30 ಲಕ್ಷ ರೈತರಿಗೆ 25 ಸಾವಿರ ಕೋಟಿ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ ಮಾಡಲಾಗಿದೆ ಎಂದರು.
ಕೆ.ಆರ್.ಎಸ್ ನಲ್ಲಿರುವ ಮ್ಯೂಸಿಕಲ್ ಪಾರ್ಕ್ ನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಹೊಸ ರೂಪ ನೀಡಲು ಈಗಾಗಲೇ ತಾಂತ್ರಿಕ ವರದಿಯನ್ನು ಪಡೆಯಲಾಗಿದೆ. ಬೃಂದಾವನ ಅಮ್ಯುಸ್‌ಮೆಂಟ್ ಪಾರ್ಕ್ ನ್ನು ಪಿ.ಪಿ.ಪಿ ಮಾದರಿಯಲ್ಲಿ ಟೆಂಡರ್ ಕರೆದು ರೂಪಿಸಲಾಗುವುದು. ಈ ಪಾರ್ಕ್ ನಿಂದ ಸುಮಾರು 8 ರಿಂದ 10 ಸಾವಿರ ಸ್ಥಳೀಯ ಜನರಿಗೆ ಉದ್ಯೋಗ ಸಿಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸಾಮಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಕೆ.ಎಂ. ಉದಯ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಧೀಕ್ಷಕ ಇಂಜಿನಿಯರ್ ರಘುರಾಮ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles