23.3 C
New York
Thursday, July 18, 2024

Buy now

spot_img

ಟ್ರಯಲ್ ಬ್ಲಾಸ್ಟ್ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆ

ಮಂಡ್ಯ :- ಕೆ ಆರ್ ಎಸ್ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಮುಂದಾಗಿರುವ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಮಾರಕವಾಗಿರುವ ಟ್ರಯಲ್ ಬ್ಲಾಸ್ಟ್ ಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕೆ ಆರ್ ಎಸ್ ಅಚ್ಚುಕಟ್ಟ ಪ್ರದೇಶದ ಕೃಷಿಕರಿಗೆ ಜಲಾಶಯ ಬದುಕು ನೀಡಿದೆ ಇದೀಗ ಜನರ ಬದುಕನ್ನು ಕಸಿಯಲು ಮುಂದಾಗಿರುವ ಆಳುವ ವರ್ಗದ ರೈತ ವಿರೋಧಿ ನೀತಿಯನ್ನ ಖಂಡಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್ ಮಾತನಾಡಿ, ಕೃಷ್ಣರಾಜಸಾಗರ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ಗೆ ಮುಂದಾಗಿದೆ ಈಗಾಗಲೇ ಐದು ಕಡೆ ಗುಂಡಿ ತೋಡಿ ಸಿದ್ಧತೆ ಮಾಡಿಕೊಂಡಿದೆ, ನ್ಯಾಯಾಲಯದ ಆದೇಶದಂತೆ ಟ್ರಯಲ್ ಬ್ಲಾಸ್ಟ್ ನಡೆಯುತ್ತಿದೆ ಎಂದು ರೈತರನ್ನ ದಿಕ್ಕು ತಪ್ಪಿಸುತ್ತಿದ್ದಾರೆ, ಜಲಾಶಯಕ್ಕೆ ಮಾರಕವಾಗಿದ್ದರೂ ಯಾವ ಕಾರಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಶ್ನಿಸಿದರು.
ಮೈಸೂರು ಮಹಾರಾಜರು ನಿರ್ಮಿಸಿದ ಕೆ ಆರ್ ಎಸ್ ಕಾವೇರಿ ಕೊಳ್ಳದ ಜನರ ಬದುಕನ್ನು ಕಟ್ಟಿಕೊಟ್ಟಿದೆ,  ರೈತರ ಬದುಕು ಹಸನಾಗಿಸಿದೆ, ಜಲಾಶಯದ ತಳ ಭಾಗದಲ್ಲಿರುವ ಕಲ್ಲು ಸೂಕ್ಷ್ಮವಾಗಿದೆ, ಟ್ರಯಲ್ ಬ್ಲಾಸ್ಟ್ ಮಾಡಿದರೆ ಕಲ್ಲಿನ ಪದರಕ್ಕೆ ಹಾನಿಯಾಗಲಿದೆ ಇದರಿಂದ ಜಲಾಶಯಕ್ಕೆ ತೊಂದರೆ ಎದುರಾಗಲಿದೆ, ಜಲಾಶಯದ ಸುರಕ್ಷತೆ ಮೊದಲ ಆದ್ಯತೆ ಆಗಬೇಕು, ಹಾಗಾಗಿ 20 ಕಿ.ಮೀ ವ್ಯಾಪ್ತಿಯಲ್ಲಿ ಅಲ್ಲ 50 ಕಿ.ಮೀ  ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು, ಇದೇ ಪ್ರದೇಶದಲ್ಲಿ ಏಕೆ ಗಣಿಗಾರಿಕೆ ನಡೆಸಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಟ್ರಯಲ್ ಬ್ಲಾಸ್ಟ್ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನಡೆವ ಮೂಲಕ ರೈತರ ಬದುಕಿನ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು, ಕೃಷಿ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಆಳುವ ವರ್ಗ ಯೋಚಿಸಬೇಕು, ಅದನ್ನು ಬಿಟ್ಟು ಕೆ ಆರ್ ಎಸ್ ಜಲಾಶಯಕ್ಕೆ ಹಾನಿ ಮಾಡುವ ಟ್ರಯಲ್ ಬ್ಲಾಸ್ಟ್  ಗೆ ಮುಂದಾದರೆ ತಡೆಯಲು ಸಿದ್ಧರಿದ್ದೇವೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಆಲಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ರೈತ ಸಂಘದ ಇಂಡುವಾಳು ಚಂದ್ರಶೇಖರ್,  ಮುದ್ದೆ ಗೌಡ,ಸುಧೀರ್ ಕುಮಾರ್, ಕನ್ನಡ ಸೇನೆ ಮಂಜುನಾಥ್, ಎಂ.ಎಲ್ ತುಳಸೀದರ್,ಕೃಷ್ಣಪ್ರಕಾಶ್ ನೇತೃತ್ವ ವಹಿಸಿದ್ದರು..

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles