ಮಂಡ್ಯ :- ತಾಲೂಕಿನ ಬೂದನೂರು ಗ್ರಾಮ ಪಂಚಾಯತಿಯ ಗ್ರಾಮಸಭೆಗೆ ಜನರು ಬಾರದ ಹಿನ್ನೆಲೆಯಲ್ಲಿ ಮುಂದೂಡಲಾಯಿತು.
ಹಳೆ ಬೂದನೂರಿನ ಪಂಚಾಯಿತಿ ಕಚೇರಿ ಆವರಣದಲ್ಲಿ ನಿಗದಿಯಾಗಿದ್ದ ಗ್ರಾಮಸಭೆಗೆ ನೋಡೆಲ್ ಅಧಿಕಾರಿಯಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸ್ವಾಮಿ ಸಿ, ಕಾರ್ಯದರ್ಶಿ ಪವಿತ್ರ, ಗ್ರಾಮ ಆಡಳಿತಾಧಿಕಾರಿ ಮೇಘ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಹಾಜರಾಗಿದ್ದರು.
ಬೆಳಿಗ್ಗೆ 11ರ ವೇಳೆಗೆ ಆರಂಭಗೊಳ್ಳಬೇಕಾಗಿದ್ದ ಸಭೆಗೆ ಅರ್ಧ ತಾಸು ಕಾಯ್ದು ಕುಳಿತರು ಜನತೆ ಬಾರಲಿಲ್ಲ ಅಷ್ಟಾಗಿಯೂ ನೋಡೆಲ್ ಅಧಿಕಾರಿ ಮತ್ತೆ 15 ನಿಮಿಷ ಕಾಲಾವಕಾಶ ನೀಡಿ ಕಾಯ್ದರೂ ಜನ ಬರಲೇ ಇಲ್ಲ. ಇದರಿಂದ ಅಧ್ಯಕ್ಷೆ ಮಾನಸ,ಗ್ರಾಮಸಭೆ ಮುಂದೂಡಿರುವುದಾಗಿ ಘೋಷಿಸಿದರು.
ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೋಭಾಶ್ರೀ ಮುಂದಿನ ಗ್ರಾಮಸಭೆ ದಿನಾಂಕ ಘೋಷಿಸುವಂತೆ ಒತ್ತಾಯಿಸಿದಾಗ ನೋಡೆಲ್ ಅಧಿಕಾರಿ ವಾರದಲ್ಲೇ ಸಭೆ ನಿಗದಿ ಮಾಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಿ.ಕೆ.ಸತೀಶ್ ಗ್ರಾಮಸಭೆಗೆ ಇಲಾಖಾ ಅಧಿಕಾರಿಗಳನ್ನು ಕರೆಸ ಬೇಕು,ಇಲಾಖಾ ಸೌಲಭ್ಯಗಳ ಮಾಹಿತಿಯನ್ನಾದರೂ ಒದಗಿಸುವಂತೆ ಒತ್ತಾಯಿಸಿದರು
ಸಭೆಯತ್ತ ಸುಳಿಯದ ಜನತೆ : ಬೂದನೂರು ಗ್ರಾಮ ಸಭೆ ಮುಂದೂಡಿಕೆ
Recent Comments
on Hello world!
