ಮಂಡ್ಯ :- ಪಿ ಎಸ್ ಎಸ್ ಕೆ ಕಾರ್ಮಿಕರ ಬ್ಯಾಂಕ್ ಉಳಿಸಲು ಮುಂದಾಗುವುದರ ಜೊತೆಗೆ ನಿವೃತ್ತ ಕಾರ್ಮಿಕರನ್ನು ಸದಸ್ಯರನ್ನು ಮಾಡಿಕೊಳ್ಳುವಂತೆ ಒತ್ತಾಯಿಸಿ ಪಿಎಸ್ ಎಸ್ ಕೆ ನಿವೃತ್ತ ನೌಕರರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ನಿವೃತ್ತ ಕಾರ್ಮಿಕರು ಪಾಂಡವಪುರದ ಪಿ.ಎಸ್.ಎಸ್.ಕೆ ಕಾರ್ಮಿಕರ ಒಳಿತಿಗಾಗಿ 1957 ರಲ್ಲಿ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್ ಸ್ಥಾಪನೆ ಮಾಡಲಾಯಿತು ಅಂದಿನಿಂದಲೂ ಕಾರ್ಮಿಕರ ಹಿತಾಸಕ್ತಿ ಕಾಪಾಡಿಕೊಂಡು ಬರಲಾಗುತ್ತಿತ್ತು ಆದರೆ ಇತ್ತೀಚೆಗೆ ನಿವೃತ್ತ ಕಾರ್ಮಿಕರನ್ನು ಬ್ಯಾಂಕ್ ಸದಸ್ಯರನ್ನಾಗಿ ಮಾಡಿಕೊಳ್ಳದೆ ವಂಚನೆ ಮಾಡುತ್ತಾ ಬರಲಾಗಿದ್ದು ಅಷ್ಟೇ ಅಲ್ಲದೆ ಪೂರ್ವಜರು ಕ್ರೂಡೀಕರಣ ಮಾಡಿದ್ದ ಹಣವನ್ನು ಮನಸೋಇಚ್ಚೆ ವ್ಯಯ ಮಾಡಲಾಗುತ್ತಿದ್ದು ಇದರಿಂದ ಬ್ಯಾಂಕಿನ ಉಳಿವಿನ ಬಗ್ಗೆ ಆತಂಕ ಎದುರಾಗಿದೆ.
ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬ್ಯಾಂಕಿನ ಚಟುವಟಿಕೆ ಬಗ್ಗೆ ವಿಚಾರಣೆ ನಡೆಸಿ ಬ್ಯಾಂಕನ್ನು ಉಳಿಸಿಕೊಳ್ಳಲು ಮುಂದಾಗಬೇಕು, ನಿವೃತ್ತ ನೌಕರರಿಗೆ ಬ್ಯಾಂಕ್ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಎಂ ನಂಜೇಗೌಡ, ಎನ್ ಬೋರೇಗೌಡ, ನರಸೇಗೌಡ, ಪಾರ್ಥಸಾರಥಿ, ಪರಮೇಶ್ವರಚಾರಿ, ಬ್ರಹ್ಮಲಿಂಗೇಶ್ವರ, ಭಾಗ್ಯಮ್ಮ, ಜಯಮ್ಮ, ಸರೋಜಮ್ಮ ಇತರರಿದ್ದರು.
ಪಿಎಸ್ಎಸ್ ಕೆ ಕಾರ್ಮಿಕರ ಬ್ಯಾಂಕ್ ಉಳಿವಿಗಾಗಿ ಪ್ರತಿಭಟನೆ
Recent Comments
on Hello world!
