ಭಾರತೀ ನಗರ :- ಕೆಎಂಎಫ್ ಮಾದರಿಯಲ್ಲಿ ತೆಂಗು ಅಭಿವೃದ್ದಿ ಮಂಡಳಿಯನ್ನು ಸಹಕಾರ ಸಂಘದ ರೂಪದಲ್ಲಿ ಅಭಿವೃದ್ದಿಗೊಳಿಸಲು ಸರ್ಕಾರ ಮುಂದಾಗಬೇಕೆಂದು ಶಾಸಕ ಹಾಗೂ ಆತ್ಮಲಿಂಗೇಶ್ವರ ತೆಂಗುಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮಧುಜಿಮಾದೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಂಎಫ್ ರಾಜ್ಯದಲ್ಲೇ ಅಭಿವೃದ್ದಿ ಕಂಡಿದೆ. ಅದೇ ಮಾದರಿಯಲ್ಲಿ ತೆಂಗು ಬೆಳೆ ಅಭಿವೃದ್ದಿಗೂ ಸರ್ಕಾರ ಪ್ರೋತ್ಸಾಹ ನೀಡಿದರೆ ರೈತರು ಆರ್ಥಿಕ ಸಮಸ್ಯೆಯಿಂದ ಹೊರಬಹುದು ಎಂದರು
ಮಹಿಳೆಯರು ಹೈನುಗಾರಿಕೆಯಲ್ಲಿ ಮುಂದೆ ಇರುವುದರಿಂದ ಆರ್ಥಿಕ ವ್ಯವಸ್ಥೆಯಲ್ಲಿ ಸದೃಢರಾಗಿದ್ದಾರೆ. ಹಾಗೆಯೇ ಪುರುಷರಿಗೆ ತೆಂಗು ಮುಖ್ಯವಾಗಿದೆ .
ಕೆಎಂಎಫ್ ಹಲವಾರು ಉಪ ಉತ್ಪನ್ನಗಳನ್ನು ಮಾಡಿ ಲಾಭದಾಯಕವಾಗಿದೆ. ಹಾಗೆಯೇ ತೆಂಗು ಬೆಳೆಯಿಂದಲೂ ಹಲವಾರು ಉತ್ಪನ್ನಗಳನ್ನು ಮಾಡಬಹುದು. ಹಾಗಾಗಿ ಕೆಎಂಎಫ್ ಮಾದರಿಯಲ್ಲೇ ತೆಂಗು ಅಭಿವೃದ್ದಿ ಮಂಡಳಿಯನ್ನು ಸಹಕಾರ ಸಂಘದ ರೂಪದಲ್ಲಿ ಮಾಡಲಿ ಎಂಬುವುದು ನಮ್ಮೆಲ್ಲರ ಆಶಯ ಎಂದರು.
ಜಿಲ್ಲೆಯ ಜನರು ತೆಂಗು ಬೆಳೆಯನ್ನೇ ನಂಬಿ ಬದುಕುತ್ತಿದ್ದಾರೆ. ತೆಂಗು ಬೆಳೆಯಲ್ಲಿ ಭತ್ತ, ರಾಗಿ, ಕಬ್ಬು, ತರಕಾರಿ ಸೇರಿದಂತೆ ಇನ್ನಿತರೆ ವ್ಯವಸಾಯವನ್ನು ಮಾಡಿಕೊಂಡು ಬಂದಿದ್ದಾರೆ. ತೆಂಗು ಬೆಳೆಯಿಂದ ರೈತರು ಆದಾಯವನ್ನು ಸಹ ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಪ್ಪುತಲೆ ಹುಳುಬಾಧೆಯಿಂದ ತೆಂಗಿನ ಮರಗಳು ನಾಶಗೊಂಡಿವೆ. ಕೃಷಿ ಇಲಾಖೆ ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೃಷಿಕರ ಬದುಕಿಗೆ ಪೂರಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಭಾರತೀನಗರ ತೆಂಗುಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಂ.ನಂಜೇಗೌಡ ಮಾತನಾಡಿ, ಜಿಲ್ಲೆಯ ಮದ್ದೂರಿನ ಎಳನೀರು ಮಾರುಕಟ್ಟೆ ಏಷ್ಯಖಂಡದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದರು.
ಜಿಲ್ಲೆಯಲ್ಲಿ ರೈತರು ತೆಂಗುಬೆಳೆಯನ್ನೇ ಅವಲಂಬಿಸಿದ್ದಾರೆ. ಎಳನೀರು ವ್ಯಾಪಾರದಿಂದ ಸಾಕಷ್ಟು ಮಂದಿ ಆರ್ಥಿಕ ಸಮಸ್ಯೆಯಿಂದ ಹೊರಬಂದಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವು ಸಹ ಲಭಿಸಿದೆ ಸುಂದರ
ಇದೇ ವೇಳೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಲು ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಸಿದ್ದಪ್ಪ, ಡಾ.ಜಿ.ಮಂಜುನಾಥ್, ಡಾ.ಜಿ.ಪಿ.ಮುತ್ತುರಾಜು ತೆಂಗಿನ ಬೆಳೆಯ ಸಮಗ್ರ ಅಭಿವೃದ್ದಿಯ ಬಗ್ಗೆ ಮಾಹಿತಿ ನೀಡಿದರು.
ತೆಂಗು ಅಭಿವೃದ್ದಿ ಮಂಡಳಿಯಲ್ಲಿ ದೊರೆಯುವ ಸಹಾಯ ಸೌಲಭ್ಯಗಳನ್ನು ಕುರಿತು ತೆಂಗು ಅಭಿವೃದ್ದಿ ಮಂಡಳಿ ಅಧಿಕಾರಿಗಳಾದ ಕುಮಾರಿ ಚಂದನ ಅವರು ಮಾಹಿತಿ ನೀಡಿದರೆ ಜಿ.ಶರತ್ಕುಮಾರ್ ಅವರು ತೆಂಗಿನಲ್ಲಿ 70 ಕ್ಕೂ ಹೆಚ್ಚು ಮೌಲ್ಯ ವದರ್ಿತ ಪದಾರ್ಥಗಳನ್ನು ತಯಾರು ಮಾಡಬಹುವುದರ ಕುರಿತಂತೆ ಸಮಗ್ರ ಮಾಹಿತಿ ನೀಡಿದರು.
ತೆಂಗಿನ ಸಸಿ ವಿತರಣೆ:
ರೈತರಿಗೆ ಉಪಯುಕ್ತವಾಗಲಿ ಎಂಬ ಕಾರಣದಿಂದ ತೆಂಗಿನ ಉತ್ಪನ್ನಗಳ ಪ್ರದರ್ಶವನ್ನು ಏರ್ಪಡಿಸಲಾಗಿತ್ತು. ನಂತರ ರೈತರಿಗೆ ತೆಂಗಿನ ಸಸಿಯನ್ನು ಶಾಸಕ ಮಧುಜಿಮಾದೇಗೌಡ ವಿತರಣೆ ಮಾಡಿದರು. ಕಾರ್ಯಗಾರದಲ್ಲಿ ನೂರಾರು ತೆಂಗುಬೆಳೆ ರೈತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತೆಂಗು ಅಭಿವೃದ್ದಿ ಮಂಡಳಿ ಉಪನಿದರ್ೇಶಕ ಆರ್.ಜಯಂತ್, ಮಹದೇಶ್ವರ ತೆಂಗುಬೆಳೆಗಾರರ ಒಕ್ಕೂಟದ ಅಧ್ಯಕ್ಷ ಚಂದೂಪುರ ಪಾಪಣ್ಣ, ಕೆ.ಎನ್.ರೂಪಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ, ಸಿ.ಎ.ಕೆರೆ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಡಾ.ಶಿವಪ್ರಸಾದ್ ಸೇರಿದಂತೆ ಹಲವರಿದ್ದರು