ನಿರ್ದೇಶಕ ದುನಿಯಾ ಸೂರಿ ‘ಕೆಂಡಸಂಪಿಗೆ’ ಚಿತ್ರ ತೆರೆಕಂಡ ಬಳಿಕ ಅದರ ಮುಂದಿನ ಭಾಗ ‘ಕಾಗೆ ಬಂಗಾರ’ಕ್ಕೆ ಕೈ ಹಾಕುತ್ತೇನೆಂದು ಸಾಕಷ್ಟು ಸಲ ಹೇಳಿದ್ದರು. ಸುರೇಂದ್ರನಾಥ್ ಬರೆದು, ವಿಕ್ಕಿ ವರುಣ್ ಮತ್ತು ಮನ್ವಿತಾ ಹರೀಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ 2015ರಲ್ಲಿ ತೆರೆ ಕಂಡಿತ್ತು.
ವಿಭಿನ್ನವಾದ ಕಥಾವಸ್ತುವಿನಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಈ ಚಿತ್ರ ‘ಕಾಗೆ ಬಂಗಾರ’ ಮತ್ತು ‘ಬ್ಲ್ಯಾಕ್ ಮ್ಯಾಜಿಕ್’ ಎಂಬ ಇನ್ನೆರಡು ಭಾಗಗಳನ್ನು ಹೊಂದಿದೆ ಎಂದು ಸೂರಿ ಹೇಳಿದ್ದರು.
ಇದೀಗ ಜಯಣ್ಣ ನಿರ್ಮಾಣದಲ್ಲಿ, ದುನಿಯಾ ಸೂರಿ ನಿರ್ದೇಶನದಲ್ಲಿಯೇ ‘ಕಾಗೆ ಬಂಗಾರ’ ಸೆಟ್ಟೇರುತ್ತಿದೆ. ವಿಕ್ಕಿ ವರುಣ್‌ಗೆ ರಿತನ್ಯಾ ಜೋಡಿಯಾಗಲಿದ್ದಾರೆ. ಆದರೆ ಇದು ‘ಕೆಂಡಸಂಪಿಗೆ’ಯ ಮುಂದುವರಿದ ಭಾಗವಲ್ಲ ಎನ್ನುತ್ತಿದೆ ಚಿತ್ರತಂಡ.