Friday, May 9, 2025
Homeಜಿಲ್ಲೆಮಂಡ್ಯ ನಗರಸಭೆಯಲ್ಲಿ ಇ-ಖಾತೆ ಲೋಪ ಸರಿಪಡಿಸಿ

ಮಂಡ್ಯ ನಗರಸಭೆಯಲ್ಲಿ ಇ-ಖಾತೆ ಲೋಪ ಸರಿಪಡಿಸಿ

ಮಂಡ್ಯ :- ನಗರಸಭೆಯಲ್ಲಿ ಅನಧಿಕೃತ ಸ್ವತ್ತುಗಳಿಗೆ  ಇ-ಖಾತೆ ಮಾಡಲು ಆಗುತ್ತಿರುವ ಲೋಪ ಸರಿಪಡಿಸಲು ಮುಂದಾಗಬೇಕು ಎಂದು ಜಿಲ್ಲಾಡಳಿತಕ್ಕೆ ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ನೇತೃತ್ವದಲ್ಲಿ ನಾಗರಿಕರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಖಾತೆ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ, ಸ್ವತ್ತುಗಳ ಮಾಲೀಕರು ಸ್ವತ್ತಿನ ಕಂದಾಯ ಪಾವತಿಸಿ ಇ-ಖಾತೆ ಪಡೆಯಬಹುದು ಖಾತೆ ಮಾಡಿಕೊಡಲು ಪೌರಾಡಳಿತ ಸಚಿವ ರಹೀಮ್ ಖಾನ್  ಸ್ಥಳೀಯ ಸಂಸ್ಥೆಗಳಿಗೆ ಆದೇಶ ಮಾಡಿದ್ದಾರೆ ಆದರೆ ಮಂಡ್ಯ ನಗರಸಭೆಯಲ್ಲಿ ಖಾತೆ ಮಾಡಿಕೊಡಲು ವಿನಾಕಾರಣ ಅಲೆದಾಡುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ಮತ್ತು ನೌಕರರು ನಗರಸಭೆ ನೀಡಿರುವ ಎಂಡಾರಸ್ ಮೆಂಟ್ ಗೆ ಖಾತೆ ಮಾಡುತ್ತಿಲ್ಲ, ಸಮರ್ಪಕ  ಚೆಕ್ಕುಬಂದಿ   ಹಾಕದೆ ಖಾತೆ ಮಾಡುತ್ತಿದ್ದಾರೆ, 13 ವರ್ಷಗಳ ಇ.ಸಿ.ನೀಡಿದರೂ ಸಹ ಮತ್ತೆ ಹಳೆ ಇ.ಸಿ. ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ,ವಾರಸುದಾರರಿಗೆ ಪೌತಿ ಖಾತೆ ಮಾಡಲು ವಿಳಂಬ ಮಾಡುತ್ತಿದ್ದಾರೆ ಅಲ್ಲದೆ  ಕಂದಾಯವನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆಂದು ದೂರಿದರು  ನಿಯಮಾನುಸಾರ ಅರ್ಜಿಯಲ್ಲಿ ಲೋಪದೋಷದಲ್ಲಿ ಏಳು ದಿನಗಳೊಳಗೆ ಹಿಂಬರಹ ನೀಡದೆ ಸತಾಯಿಸುತ್ತಿದ್ದಾರೆ.ನಗರಸಭೆಯಲ್ಲಿ ಖಾತೆ ಮಾಡುವುದರಲ್ಲಿ ಅಧಿಕಾರಿಗಳಿಗಿಂತ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ,ಗಾಂಧೀನಗರ ಕಾಳಮ್ಮ ದೇವಸ್ಥಾನದಲ್ಲಿ ಇ-ಸ್ವತ್ತು ಖಾತೆ ಆಂದೋಲನ ನಡೆಸಲು ಮನವಿ ಮಾಡಿದರು ಸಹ ಅರ್ಜಿಗೆ ಹಿಂಬರಹ  ನೀಡಿರುವುದಿಲ್ಲ ಇ ಖಾತೆ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿರುವ ದೂರುಗಳು ಹೇಳಿ ಬರುತ್ತಿವೆ, ತಾತ ಅಭಿಯಾನ ಈ ತಿಂಗಳ ಹತ್ತನೇ ದಿನದಂದು ಮುಗಿಯುವ ಹಂತಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಮುಂದಿನ ಎರಡು ತಿಂಗಳ ಕಾಲ ಇ ಖಾತಾ ಅಭಿಯಾನವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪ್ರಸನ್ನ ಕುಮಾರ್, ಸುನೀಲ್ ಕುಮಾರ್, ಎಚ್ ಕೆ ಮಂಜುನಾಥ್, ದಿಲೀಪ್, ದೀಪಕ್ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments