ಮಂಡ್ಯ :- ಮಂಡ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್ ಶಿವಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್ ಮೂರ್ತಿ ಆಯ್ಕೆಯಾದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ.ಎಸ್ ಶಿವಪ್ರಕಾಶ್ ( ಮಂಡ್ಯ ಪ್ರೆಸ್ ) ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್ ಮೂರ್ತಿ ( ಜನಯೋಗಿ ) ಖಜಾಂಚಿಯಾಗಿ ಎನ್. ನಾಗೇಶ್ ( ಸಂಜೆ ಸಮಾಚಾರ ) ಉಪಾಧ್ಯಕ್ಷರಾಗಿ ಬಸವರಾಜ್ ಹೆಗಡೆ ( ಸಂಜೆ ಮಿತ್ರ ) ಮಂಜುಳಾ ಕಿರುಗಾವಲು ( ಜನೋದಯ ) ಕಾರ್ಯದರ್ಶಿಯಾಗಿ ಶಿವಕುಮಾರ್ ( ಮಂಡ್ಯ ಸರ್ಕಲ್ ) ಎಲ್ ಸಿದ್ದರಾಜು ( ಪ್ರಜಾ ಪಾರಮ್ಯ ) ರವರನ್ನು ಆಯ್ಕೆ ಮಾಡಲಾಯಿತು.
ನಿರ್ಗಮಿತ ಅಧ್ಯಕ್ಷ ಕೆ.ಎನ್ ನವೀನ್ ಕುಮಾರ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಎ.ಎಲ್ ಶಿವಶಂಕರ್, ಸಂಘದ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಕೆರಗೋಡು,ಕೆ.ಸಿ ಮಂಜುನಾಥ್, ಬಿ.ಪಿ ಪ್ರಕಾಶ್,ಕೃಷ್ಣ ಸ್ವರ್ಣ ಸಂದ್ರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್ ಸಂಪಾದಕರಾದ ಕೆ. ಎನ್. ಪುಟ್ಟಲಿಂಗೇಗೌಡ, ಜಿ ಚೆನ್ನಯ್ಯ ಪಿ.ವೆಂಕಟರಾಮಯ್ಯ,ಈ.ಶಿವಸ್ವಾಮಿ, ಎ. ಎಲ್ ಶೇಖರ್, ಸುಮಾ ಪುರುಷೋತ್ತಮ್, ನವೀನ್ ಬಸವೇಗೌಡ,ಅಶೋಕ್, ಮದನ್ ಗೌಡ, ಚಂದ್ರೇಗೌಡ ಸೇರಿದಂತೆ ಇತರರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಮಂಡ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ ಎಂ.ಎಸ್ ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಎಸ್ ಮೂರ್ತಿ ಆಯ್ಕೆ
Recent Comments
Hello world!
on