Home ಜಿಲ್ಲೆಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಪ್ರತಿಭಟನೆ

ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಪ್ರತಿಭಟನೆ

by M S MURTHY

ಮಂಡ್ಯ : ಮಂಡ್ಯ ನಗರ ಪ್ರದೇಶದಲ್ಲಿ ವಸತಿ ರಹಿತರನ್ನು ಗುರುತಿಸಲು ಪ್ರತಿ ವಾರ್ಡ್ ಮಟ್ಟದಲ್ಲಿ ಸಮೀಕ್ಷಾ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು  ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ  ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿರುವವರಿಗೆ ವಸತಿ ಸೌಲಭ್ಯ ಕಲ್ಪಿಸಿ ಕೊಡುವುದಾಗಿ ಜಿಲ್ಲಾಡಳಿತ ಹೇಳಿದ್ದು ಆದರೆ  ಸದರಿ ಯೋಜನೆ ಬಗ್ಗೆ ವಸತಿ ರಹಿತ ಸಂತ್ರಸ್ತರಿಗೆ ತಿಳಿದಿಲ್ಲ ಅಷ್ಟೇ ಅಲ್ಲದೆ ಕಳೆದ ಎಂಟು, ಒಂಭತ್ತು ವರ್ಷದಿಂದ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಇದುವರೆಗೆ ಸೌಲಭ್ಯ ಕಲ್ಪಿಸಲು ಯಾವುದೇ ಕ್ರಮ ವಹಿಸಿಲ್ಲದ ಕಾರಣ ನಾವುಗಳು ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ  ವಾರ್ಡ್ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಲು ತಂಡ ರಚಿಸಬೇಕು,ಸ್ವಂತ ಮನೆಯಿಲ್ಲದ ಸಂತ್ರಸ್ತರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು ಅದೇ ರೀತಿ  ರಾಜೀವ್ ಗಾಂಧಿ ವಸತಿ ಯೋಜನೆಯನ್ನು ತುರ್ತು ವಿಚಾರ ಎಂದು ಪರಿಗಣಿಸಿ ಆದಷ್ಟು ಶೀಘ್ರ ಸ್ವಂತ ಮನೆ ನಿರ್ಮಾಣ ಮಾಡಿಕೊಡಬೇಕು,ಚುನಾಯಿತ ಜನ  ಪ್ರತಿನಿಧಿ,ಸರ್ಕಾರಿ ನೌಕರರಿಗೆ ಹೆಚ್‌ಆರ್‌ಒ ನೀಡುವ ಮಾದರಿಯಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುವವರೆಗೆ ಮನೆ ಬಾಡಿಗೆ ಹಣ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅಭಿ ಒಕ್ಕಲಿಗ, ನರಸಿಂಹಮೂರ್ತಿ, ಎಂ ವಿ ಕೃಷ್ಣ, ವೆಂಕಟ ಲಕ್ಷ್ಮಮ್ಮ, ಸಮೀರ್ ಅಹಮದ್, ಎಚ್ ಡಿ ಜಯರಾಮ್ ನೇತೃತ್ವ ವಹಿಸಿದ್ದರು.

You may also like

Leave a Comment