ಮಂಡ್ಯ : ಕೆ ಆರ್ ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ಬಸ್ ನಿಲ್ದಾಣ ಪಕ್ಕದ ಹಳೆ ಸಂತೆಮಾಳದ ಬಳಿಯಲ್ಲಿ ವಾಸವಿರುವ ಪರಿಶಿಷ್ಟ ಕುಟುಂಬಗಳ ನಿವೇಶನದ ಖಾತೆಯನ್ನು ಬದಲಾವಣೆ ಮಾಡಿಕೊಡು ವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಡ್ಯದಲ್ಲಿ ಆಹೋ ರಾತ್ರಿ ಧರಣಿ ಆರಂಭಿಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿಯ ನೇತೃತ್ವದಲ್ಲಿ ಆಹೋ ರಾತ್ರಿ ಧರಣಿ ನಡೆಸಿ ಪರಿಶಿಷ್ಟ ಸಮುದಾಯದ ಐದು ಕುಟುಂಬಗಳಿಗೆ ನಿವೇಶನದ ಖಾತೆ ಮಾಡಿಕೊಡಲು ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಿಕ್ಕೇರಿ ಗ್ರಾಮದ ಹಳೆ ಸಂತೆ ಮಾಳದ ಪಕ್ಕದ ಪ್ರದೇಶದಲ್ಲಿ ಧಮ್ಮಮ್ಮ, ಮಂಗಳ ಗೌರಿ, ನಾಗರಾಜು, ಭಲುಬಜ ಹಾಗೂ ಸೋಮಶೇಖರ ಕುಟುಂಬ ವರ್ಗದವರು ಪೂರ್ವಜರ ಕಾಲದಿಂದಲೂ ವಾಸವಿದ್ದು, ಸದರಿ ನಿವೇಶನಗಳ ಖಾತೆಯ ತಾತ ಮುತ್ತಾತನ ಹೆಸರಿನಲ್ಲಿವೆ, ಆದರೆ ಈಗ ಬಾಸವಿರುವ ಅವರ ಕುಟುಂಬದ ಸದಸ್ಯರಿಗೆ ಖಾತೆ ಮಾಡಿಕೊಡಲು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿ ಕಾರಿದರು.
ಖಾತೆ ಮಾಡಿ ಕೊಡುವಂತೆ ತಾಲೂಕು ಪಂಚಾಯಿತಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ಸಹ ಇದುವರೆಗೂ ಮಾಡಿಕೊಟ್ಟಿಲ್ಲ ಜಿಲ್ಲಾಧಿಕಾರಿಗಳು ತಕ್ಷಣ ಖಾತೆ ಮಾಡಿಕೊಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಂಜುಂಡ ಮೌರ್ಯ, ಸುಲೋಚನಾ,ಮಂಜುಳಾ ಸಂತೋಷ್, ಮಾದೇವಿ, ಮಂಗಳ ಗೌರಿ, ನಾಗರಾಜು ನೇತೃತ್ವ ವಹಿಸಿದ್ದರು.
ನಿವೇಶನ ಖಾತೆ ಬದಲಾವಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ
Recent Comments
on Hello world!
