1.9 C
New York
Friday, December 20, 2024

Buy now

spot_img

ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ

ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ. 81.67 ರಷ್ಟು ಮತದಾನ ನಡೆದಿದ್ದು. ಜೂ. 4 ರಂದು ನಡೆಯಲಿರುವ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಮಂಡ್ಯ ವಿಶ್ವವಿದ್ಯಾನಿಲಯದ ಕಾಮರ್ಸ್ ಬ್ಲಾಕ್ ನಲ್ಲಿ . ಅಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯವು ಪ್ರಾರಂಭವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು
ಕ್ಷೇತ್ರದಲ್ಲಿ ಒಟ್ಟು 1779075 ಮತದಾರರಲ್ಲಿ, 1453016 ಮತದಾರರು ಮತ ಚಲಾಯಿಸಿದ್ದಾರೆ. ಮಳವಳ್ಳಿಯಲ್ಲಿ ಗಂಡು – 98146, ಹೆಣ್ಣು – 97741, ಒಟ್ಟು – 195887 ಮತದಾರರು ಮತ ಚಲಾಯಿಸಿದ್ದು, ಶೇ. 77.23 ರಷ್ಟು ಮತದಾನವಾಗಿದೆ.
ಮದ್ದೂರಿನಲ್ಲಿ ಗಂಡು- 87323, ಹೆಣ್ಣು -91703, ಒಟ್ಟು 179026 ಮತದಾರರು ಮತ ಚಲಾಯಿಸಿದ್ದು, ಶೇ. 82.98 ರಷ್ಟು ಮತದಾನವಾಗಿದೆ.ಮೇಲುಕೋಟೆಯಲ್ಲಿ ಗಂಡು-88175, ಹೆಣ್ಣು-89189, ಒಟ್ಟು 177364 ಮತದಾರರು ಮತ ಚಲಾಯಿಸಿದ್ದು, ಶೇ. 87.20 ರಷ್ಟು ಮತದಾನವಾಗಿದೆ.ಮಂಡ್ಯದಲ್ಲಿ ಗಂಡು-86970, ಹೆಣ್ಣು-89859, ಒಟ್ಟು 176829 ಮತದಾರರು ಮತ ಚಲಾಯಿಸಿದ್ದು, ಶೇ. 77.00 ರಷ್ಟು ಮತದಾನವಾಗಿದೆ.ಶ್ರೀರಂಗಪಟ್ಟಣ ಗಂಡು- 90507, ಹೆಣ್ಣು-93336, ಒಟ್ಟು 183843 ಮತದಾರರು ಮತ ಚಲಾಯಿಸಿದ್ದು, ಶೇ. 84.48 ರಷ್ಟು ಮತದಾನವಾಗಿದೆ.ನಾಗಮಂಗಲದಲ್ಲಿ ಗಂಡು-92195, ಹೆಣ್ಣು-91281, ಒಟ್ಟು 183476 ಮತದಾರರು ಮತ ಚಲಾಯಿಸಿದ್ದು,ಶೇ 84.73 ರಷ್ಟು ಮತದಾನವಾಗಿದೆ.ಕೃಷ್ಣರಾಜಪೇಟೆಯಲ್ಲಿ ಗಂಡು-89362, ಹೆಣ್ಣು-91112, ಒಟ್ಟು 180474 ಮತದಾರರು ಮತ ಚಲಾಯಿಸಿದ್ದು, ಶೇ. 80.63 ರಷ್ಟು ಮತದಾನವಾಗಿದೆ. ಕೆ. ಆರ್ ನಗರದಲ್ಲಿ ಗಂಡು-87834, ಹೆಣ್ಣು-88283, ಒಟ್ಟು 176117 ಮತದಾರರು ಮತ ಚಲಾಯಿಸಿದ್ದು, ಶೇ
80.50 ಮತದಾನವಾಗಿದೆ.
ಮತ ಎಣಿಕೆ ಕೊಠಡಿ

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಲಾ 2 ಕೊಠಡಿಗಳಂತೆ ಒಟ್ಟು 16 ಕೊಠಡಿಗಳಲ್ಲಿ ತಲಾ 7 ಟೇಬಲ್ ಗಳಂತೆ ಅಂದರೆ 112 ಟೇಬಲ್ ಗಳಲ್ಲಿ ಇವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ. ಅಂಚೆ ಮತ ಪತ್ರ ಹಾಗೂ ETPBS ಮತಪತ್ರಗಳ ಎಣಿಕೆ 2 ಕೊಠಡಿಗಳಲ್ಲಿ ಒಟ್ಟು 11 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಕ್ಷೇತ್ರಕ್ಕೆ 14 ಟೇಬಲ್ ಗಳಂತೆ ಒಟ್ಟು 123 ಟೇಬಲ್ಗಳಲ್ಲಿ, ಒಟ್ಟು 151 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ. ಮಳವಳ್ಳಿಯಲ್ಲಿ 20 ಸುತ್ತು, ಮದ್ದೂರು – 19 ಸುತ್ತು, ಮೇಲುಕೋಟೆ -19 ಸುತ್ತು, ಮಂಡ್ಯ – 19 ಸುತ್ತು, ಶ್ರೀರಂಗಪಟ್ಟಣ – 18 ಸುತ್ತು, ನಾಗಮಂಗಲ – 19 ಸುತ್ತು, ಕೆ. ಆರ್. ಪೇಟೆ – 19 ಸುತ್ತು, ಕೆ. ಆರ್. ನಗರ – 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆ ಸಿಬ್ಬಂದಿಗಳ ನೇಮಕ

ಇ. ವಿ. ಎಂ. ಮತ ಎಣಿಕೆಗಾಗಿ ಮತ್ತು ಅಂಚೆ ಮತಪತ್ರ ಹಾಗೂ ETPBS ಮತಪತ್ರಗಳ ಎಣಿಕೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 44 ಸಿಬ್ಬಂದಿಗಳು ಹಾಗೂ ಮೀಸಲು 48 ಸಿಬ್ಬಂದಿಗಳು ಸೇರಿದಂತೆ ಒಟ್ಟು 400 ಅಧಿಕಾರಿ/ ನೌಕರರನ್ನು ನೇಮಿಸಲಾಗಿದೆ. ಇವರಲ್ಲಿ 16 ಎಆರ್ ಒಗಳು, 128 ಕೌಂಟಿಂಗ್ ಸೂಪರ್ ವೈಸರ್ ಗಳು, 128 ಕೌಂಟಿಂಗ್ ಅಸಿಸ್ಟೆಂಟ್ ಗಳು, 128 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.
ಮತ್ತು ETPBS ಮತ ಪತ್ರಗಳ ಎಣಿಕೆ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಹಾಯಕ ಚುನಾವಣಾ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಡಾ. ಹೆಚ್. ಎಲ್. ನಾಗರಾಜು ನಿರ್ವಹಿಸಲಿದ್ದಾರೆ. ಅಂಚೆ ಮತಪತ್ರ ಮತ್ತು ETPBS ಮತಪತ್ರಗಳ ಮತ ಎಣಿಕೆಗೆ ಒಟ್ಟು 69 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, 13 – ಎಆರ್ ಒ ಗಳು, 14- ಕೌಂಟಿಂಗ್ ಸೂಪರ್ ವೈಸರ್ ಗಳು, 28 – ಕೌಂಟಿಂಗ್ ಅಸಿಸ್ಟೆಂಟ್ಗಳು, 14 – ಮೈಕ್ರೋ ಅಬ್ಸರ್ವರ್ ಗಳಿಗೆ ಮತ ಎಣಿಕೆಗೆ ಸಂಬಂಧಿಸಿದಂತೆ ಇವರುಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗಿದೆ ಎಂದರು.

ಸಿಸಿ ಕ್ಯಾಮರಾ ಮತ್ತು ವೆಬ್ ಕ್ಯಾಸ್ಟಿಂಗ್

ಚುನಾವಣೆಯ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮತ್ತು ಚುನಾವಣಾ ಏಜೆಂಟರ ಚಲನವಲನಗಳ ಬಗ್ಗೆ ನಿಗಾ ವಹಿಸಲಿಕ್ಕೆ ಪ್ರತಿ ಟೇಬಲ್ ಗೆ 1 ಸಿಸಿ ಕ್ಯಾಮರಾವಿದ್ದು, ಒಟ್ಟು 123 ಟೇಬಲ್ ಗಳಿಗೆ 123 ವೆಬ್ ಕಾಸ್ಟಿಂಗ್ ಕ್ಯಾಮರಾವನ್ನು ಅಳವಡಿಸಲಾಗುತ್ತದೆ. ಭದ್ರತಾ ಕೊಠಡಿಯ ಹೊರಾಂಗಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿರುತ್ತದೆ.

ನಿಷೇಧಾಜ್ಞೆ ಜಾರಿ

ಲೋಕಸಭಾ ಸಾರ್ವತ್ರಿಕ

ಮತ ಎಣಿಕೆ ದಿನದಂದು ಮತ್ತು ಮತ ಎಣಿಕೆ ಕಾರ್ಯವು ಮುಗಿಯುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು ಅವರ ಬೆಂಬಲಿಗರೊಡನೆ ಪಟಾಕಿ ಸಿಡಿಸಿಕೊಂಡು ಮೆರವಣಿಗೆಯ ಮೂಲಕ ವಿಜಯೋತ್ಸವವನ್ನು ಆಚರಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡುವ ದೃಷ್ಢಿಯಿಂದ ಜೂನ್ 4 ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 5 ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಮಂಡ್ಯ ನಗರ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿಯಿಂದ ಐದು ಕಿಲೋಮೀಟರ್ ಸುತ್ತಳತೆ ವ್ಯಾಪ್ತಿಯಲ್ಲಿ ಜೂನ್ 3 ರಂದು ಸಂಜೆ 6 ಗಂಟೆಯಿಂದ ಜೂನ್ 5 ಬೆಳಿಗ್ಗೆ 6 ರವರೆಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರ ಸೆಕ್ಷನ್ 135ಸಿ ಮತ್ತು ಅಬಕಾರಿ ಕಾಯ್ದೆ 1965 ರ ಕಲಂ 21 ರಂತೆ ಒಣ ದಿನವನ್ನು ಜಿಲ್ಲೆಯಲ್ಲಿ ಆಚರಿಸಲು ಮದ್ಯವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles