ಮಂಡ್ಯ : ದಲಿತ ಮಹಿಳೆಯರನ್ನು ಅಪಮಾನ ಮಾಡಿರುವ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಪ್ರತಿ ಕೃತಿಯನ್ನು ಕತ್ತೆ ಮೇಲೆ ಇರಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಕತ್ತೆ ಮೇಲೆ ಯತ್ನಾಳ್ ಪ್ರತಿ ಕೃತಿ ಇರಿಸಿ ಧಿಕ್ಕಾರದ ಘೋಷಣೆ ಕೂಗಿ ಪ್ರತಿ ಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದರು ಈ ವೇಳೆ ಪೊಲೀಸರ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು,ವಿರೋಧದ ನಡುವೆಯೂ ಪೊಲೀಸರು ಪ್ರತಿ ಕೃತಿಯನ್ನು ಕಿತ್ತೊಯ್ದರು.
ಮೈಸೂರು ಮಹೋತ್ಸವದ ವೇಳೆ ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂವು ಮುಡಿಸಬೇಕು, ಇದಕ್ಕೆ ದಲಿತ ಮಹಿಳೆಯರಿಗೂ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ದಲಿತ ಸಮುದಾಯದ ಮಹಿಳೆಯರನ್ನು ಅವಮಾನಿಸಿದ್ದಾರೆ ಈತನೊಬ್ಬ ಅಯೋಗ್ಯ ಹುಚ್ಚ, ಪೋರ್ಕಿ ಎಂದು ಕಿಡಿತಾರಿದರು.
ದಲಿತ ಮಹಿಳೆಯರನ್ನು ಅವಮಾನಿಸಿರುವ ಯತ್ನಾಳ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಪೊಲೀಸರು ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಲಿಗೆ ಹಿಡಿದು ಮಾತನಾಡುವುದನ್ನು ಬೇಕು ಇಲ್ಲದಿದ್ದರೆ ದಲಿತ ಮಹಿಳೆಯರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು.
ಸಂವಿಧಾನ ಸೇನೆ ರಾಜ್ಯಾಧ್ಯಕ್ಷ ಹೆಚ್ಎಸ್ ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ಸಮಾನ ಮನಸ್ಕರ ವೇದಿಕೆಯ ಲಕ್ಷ್ಮಣ್ ಚೀರನಹಳ್ಳಿ,ನಿರಂಜನ್, ಕರವೇ ಎಚ್ ಡಿ ಜಯರಾಮ್, ನಂಜುಂಡ ಮೌರ್ಯ ನೇತೃತ್ವ ವಹಿಸಿದ್ದರು.
